ಮಾಜಿ ಶಾಸಕರಾದ ಹೆಚ್.ಪಿ. ರಾಜೇಶ್ ಹಾಗೂ ಎಸ್.ವಿ. ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ, ರೈತರ ಪರ ಬೃಹತ್ ಪ್ರತಿಭಟನೆ
ವರದಿ: ಮಂಜುನಾಥ್.ಈ. ದಾವಣಗೆರೆ
ಭಾರತೀಯ ಜನತಾ ಪಾರ್ಟಿ – ಜಗಳೂರು ಮಂಡಲ
ಇಂದು ಮಾಜಿ ಶಾಸಕರಾದ ಹೆಚ್.ಪಿ. ರಾಜೇಶ್ ಹಾಗೂ ಎಸ್.ವಿ. ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ, ಜಗಳೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವ ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಶಾಸಕರ ನಿರ್ಧಾರವನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
*ರೈತರ ಸಂಕಷ್ಟಕ್ಕೆ ಸ್ಪಂದಿಸದೆ, ಬರದ ಪರಿಸ್ಥಿತಿಯಲ್ಲೂ ಜಗಳೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ರೈತರಿಗೆ ಮಾಡಿರುವ ಅನ್ಯಾಯವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ರೈತರ ಪರವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಜಗಳೂರು ತಾಲೂಕನ್ನು ಬರ ಪಟ್ಟಿಗೆ ಸೇರ್ಪಡೆಗೊಳಿಸಿ, ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡುವಂತೆ ಆಗ್ರಹಿಸಿದರು
ರೈತರ ಹಕ್ಕಿಗಾಗಿ ಹೋರಾಟ ಮುಂದುವರಿಯುತ್ತದೆ.
ರೈತರ ಧ್ವನಿಯಾಗಿ ಹೆಚ್.ಪಿ. ರಾಜೇಶ್ ಸದಾ ಮುಂಚೂಣಿಯಲ್ಲಿ.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರು. ಕಾರ್ಯದರ್ಶಿಗಳು. ಎಲಾ ಮೋರ್ಚಾನ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು