ಸೀಮೆ ಹಸುಗಳ ಕಳವು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಲು ವಶ

ಸೀಮೆ ಹಸುಗಳ ಕಳವು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಲು ವಶ

        ಕೆಜಿಎಫ್., ಆ.:26 ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸೀಮೆ ಹಸುಗಳ ಕಳವು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ.8,00,000/- ಮೌಲ್ಯದ 14 ಹಸುಗಳನ್ನು ವಶಪಡಿಸುಕೊಳ್ಳುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪಾಪೇನಹಳ್ಳಿ, ಗೆನ್ನೇರಹಳ್ಳಿ, ಪಂತನಹಳ್ಳಿ ಗ್ರಾಮಗಳಲ್ಲಿ ಇತ್ತೀಚಿಗೆ ಹಸುಗಳು ಕಳ್ಳತನವಾಗಿರುವ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮೊ.ಸಂ 14/2026, 98/2026, 99/2026 ಮತ್ತು 105/2026 ರೀತ್ಯಾ ಪ್ರಕರಣಗಳು ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿತ್ತಿತ್ತು. ಈ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲನ್ನುö ಪತ್ತೆ ಮಾಡಲು ಬೇತಮಂಗಲ ಪಿ.ಎಸ್.ಐ ಮತ್ತು ಸಿಬ್ಬಂದಿಯವರನ್ನೂಳಗೊAಡAತೆ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.

ಕಾರ್ಯಾಚರಣೆ ನಡೆಸಿದ ಪೋಲಿಸರು ಸೀಮೆ ಹಸುಗಳ ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿದAತೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ವಾಸಿಗಳಾದ ಆ1-ವೆಂಕಟೇಶು ಬಿನ್ ಲೇಟ್ ತುಳಸಿ, 29 ವರ್ಷ, ಆ2-ನಸೀಬ್ ಬಿನ್ ಸೈಯ್ಯದ್ ಭಾಷ, 29 ವರ್ಷ ರವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿಗಳಿಂದ ಪಾಪೇನಹಳ್ಳಿ ಗ್ರಾಮದಲ್ಲಿ ಕಳುವು ಮಾಡಿದ್ದ 01, ಗೆನ್ನೇರಹಳ್ಳಿ ಗ್ರಾಮದಲ್ಲಿ ಕಳುವು ಮಾಡಿದ್ದ 03, ಪಂತನಹಳ್ಳಿ ಗ್ರಾಮದಲ್ಲಿ ಕಳುವು ಮಾಡಿದ್ದ 03, ಆಂಧ್ರಪ್ರದೇಶದ ವಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ 03, ತಮಿಳುನಾಡಿನ ವ್ಯಾಪನಪಲ್ಲಿ ಬಳಿ ಕಳುವು ಮಾಡಿದ್ದ 01, ಊತನಗೆರೆ ಬಳಿ ಕಳುವು ಮಾಡಿದ 03 ಹಸುಗಳನ್ನು ಒಟ್ಟು ರೂ.8,00,000/- ಮೌಲ್ಯದ 14 ಹಸುಗಳನ್ನು ಹಾಗೂ ಕಳುವು ಮಾಡುವ ಹಸುಗಳನ್ನು ಸಾಗಿಸಲು ಬಳಸುತ್ತಿದ್ದ ಮಹಿಂದ್ರಾ ಬೊಲೆರೋ ಟೆಂಪೋವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿರುತ್ತಾರೆ.

ಡಿ.ವೈ.ಎಸ್.ಪಿ ಲಕ್ಷö್ಮಯ್ಯ ವಿ ಮತ್ತು ಬೇತಮಂಗಲ ವೃತ್ತ ನಿರೀಕ್ಷಕರು ಜಗದೀಶ್ ಎಸ್.ಆರ್ ರವರ ಮಾರ್ಗದರ್ಶನದಲ್ಲಿ ಈ ನಾಲ್ಕು ಪ್ರಕರಣಗಳಲ್ಲಿ ಕಳವು ಮಾಲನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿಯಾದ ಬೇತಮಂಗಲ ಪಿ.ಎಸ್.ಐ ತ್ಯಾಗರಾಜ್.ಎಂ ಮತ್ತು ಸಿಬ್ಬಂದಿಗಳಾದ ಅನಿಲ್‌ಕುಮಾರ್, ರಾಘವೇಂದ್ರ ನಾಯಕ, ವೇಣುಗೋಪಾಲ್, ಶ್ರೀನಿವಾಸ್, ಕೃಷ್ಣಮೂರ್ತಿ, ರವಿಕುಮಾರ್ ಹಾಗೂ ಜೀಪ್ ಚಾಲಕರಾದ ಮನೋಹರ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.