ಜನರಲ್ಲಿ ಆತಂಕ ಮೂಡಿಸಿದ ಕಂಟೈನರ್ ಪೊಲೀಸರ ತಪಾಸಣೆ
ಬೇತಮಂಗಲ: ಗ್ರಾಮದ ಬಸ್ ನಿಲ್ದಾಣದ ಬಳಿ ಸುಮಾರು ಒಂದು ಗಂಟೆ ಕಾಲ ಕಂಟೈನರ್‌ವೊಂದು ನಿಂತಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.ಕಳೆದ ರಾತ್ರಿ ತಮಿಳುನಾಡಿನಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಕಂಟೈನರ್‌ನ್ನು ಅನುಮಾನಗೊಂಡ ಬೇತಮಂಗಲ ಪೊಲೀಸರು ಬಸ್ ನಿಲ್ದಾಣದ ಬಳಿ ತಡೆದು ಪರಿಶೀಲನೆ ನಡೆಸಿದರು. ಕಂಟೈನರ್‌ನಲ್ಲಿ ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ಸೋಫಾ ಸೀಟ್‌ಗಳನ್ನು ಪ್ಯಾಕ್ ಮಾಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಕಂಟೈನರ್‌ನ್ನು ಪೊಲೀಸರು ಪರಿಶೀಲಿಸುತ್ತಿದ್ದುದನ್ನು ಕಂಡ ಸಾರ್ವಜನಿಕರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಕಂಟೈನರ್‌ನಲ್ಲಿದ್ದ ವಸ್ತುಗಳ ಬಗ್ಗೆ ಕುತೂಹಲದಿಂದ ವೀಕ್ಷಿಸಿದರು. ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಪೊಲೀಸರ ಪರಿಶೀಲನೆಯ ಬಳಿಕ ಕಂಟೈನರ್‌ನಲ್ಲಿ ಸೋಫಾ ಸೀಟ್‌ಗಳಿರುವುದು ತಿಳಿದುಬಂದಿದ್ದು, ಬಳಿಕ ವಾಹನವನ್ನು ಮುಂದಕ್ಕೆ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು.