ಹೊಳಲು ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭವ್ಯ ಪ್ರತಿಭಾ ಪುರಸ್ಕಾರ

ಹೊಳಲು ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭವ್ಯ ಪ್ರತಿಭಾ ಪುರಸ್ಕಾರ

ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಿವಂಗತ ಎಸ್ ಜಾನಕಿ ಅವರ ಸವಿನೆನಪಿಗಾಗಿ ಗೀತ ಗಾಯನ ಕಾರ್ಯಕ್ರಮವು ಗ್ರಾಮದ ಶ್ರೀ ತಗಡೂರಯ್ಯ ದೇವಸ್ಥಾನ ಆವರಣದಲ್ಲಿ 
 ಎಚ್.ಪಿ.ಶಿವಮಾದ
 ಹಿಂದುಳಿದ ವರ್ಗದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು, ಸರ್ಕಾರದ 5 ಗ್ಯಾರಂಟಿ ನಿರ್ದೇಶಕರು, ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ನ 
ಮಾಜಿ ಅಧ್ಯಕ್ಷರು , ಇವರ ಅಧ್ಯಕ್ಷತೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.
 ಕಾರ್ಯಕ್ರಮವನ್ನು ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಹಾಗೂ ದಿವಂಗತ ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕೆಎಫ್ಎಸ್‌ಸಿ ನಿವೃತ್ತ ಮ್ಯಾನೇಜರ್ ಆದ ಎಚ್ .ಎಂ. ವಿಜಯಕುಮಾರ್ ಅವರು ಮಾತನಾಡುತ್ತಾ ಮಾಚಿದೇವರಿಗೆ ನಮಿಸುತ್ತ ಅಂದಿನ ಕಾಲದಲ್ಲಿ ಮಾಚಿದೇವರು ಮಾಡಿದಂತಹ ಕಲ್ಯಾಣ ಕ್ರಾಂತಿ, ಅಕ್ಷರ ಕ್ರಾಂತಿ, ಜ್ಞಾನಕ್ರಾಂತಿ ಇದರಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುಕೂಲವಾಗಿದೆ ಹಾಗೂ ಈ ಟ್ರಸ್ಟ್ ವತಿಯಿಂದ ಎಸ್ ಜಾನಕಿ ಅಮ್ಮನವರ ಸವಿನೆನಪಿಗಾಗಿ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ. ಈ ಕಾರ್ಯಕ್ರಮದಿಂದ ಪ್ರತಿಯೊಬ್ಬ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮದಿಂದ ಪ್ರೋತ್ಸಾಹದಿಂದ ಮಕ್ಕಳು ಚೆನ್ನಾಗಿ ಓದಿ ಮುಂದೆ  ಬರಲು ದಾರಿದೀಪವಾಗುತ್ತದೆ.ಮತ್ತು ಇದರಿಂದ ವಿದ್ಯಾರ್ಥಿಗಳು ಹೆಚ್ಚಿಗೆ ಓದಿ ಮುಂದೆ ಬರಲು ಆಸೆ ಹುಟ್ಟುತ್ತದೆ. ಮತ್ತು ಈ ದಿನ ಜಾನಕಿ ಅವರ ಕಲೆಗೆ ಭಾಷೆಗೆ ಯಾವುದೇ ಜಾತಿ, ಧರ್ಮವಿಲ್ಲ ಅವರು ಆಂಧ್ರದಲ್ಲಿ ಹುಟ್ಟಿ 48000 ಹಾಡು ಹಾಡಿದ ಕೀರ್ತಿ ಸಲ್ಲುತ್ತದೆ ಮತ್ತು ಮೈಸೂರಿನಲ್ಲಿ ಇರಬೇಕೆಂದು ಬಯಸಿ ಕೊನೆಯದಾಗಿ ಅವರ ಆಸೆ ಈಡೇರುತ್ತದೆ ಆದರಿಂದ ವಿದ್ಯಾರ್ಥಿಗಳು ಹೆಚ್ಚಿಗೆ ಓದಿ ಮುಂದೆ ಬರಬೇಕೆಂದು ಹೇಳಿದರು. 
ಮುಖ್ಯ ಅತಿಥಿಗಳಾಗಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ  ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷರಾದ ಎಚ್ ಎಲ್ ಶಿವಣ್ಣನವರು ಮಾತನಾಡುತ್ತಾ ಇವತ್ತು ಹಿಂದುಳಿದ ವರ್ಗಗಳು ಮುಂದೆ ಬರಲು ಡಾಕ್ಟರ್ ಬಿ.ಆರ್ .ಅಂಬೇಡ್ಕರ್ ಪ್ರೇರಣೆಯಿಂದ ಪ್ರತಿಯೊಬ್ಬರು ಮುನ್ನಡೆಯಲು ಸಂಘಟನೆಯಿಂದ ಸಾಧ್ಯ. ಹಾಗೂ ನಿಮ್ಮ ಜನಾಂಗಕ್ಕೆ ಮುಂದೆ ಬರಲು ಪ್ರತಿಯೊಬ್ಬರು ಮುಖಂಡರು ಶ್ರಮಿಸುತ್ತಿದ್ದಾರೆ ಮತ್ತು ಇಂದಿನಿಂದಲೂ ನಿಮ್ಮನ್ನ ಪ್ರೋತ್ಸಾಹ ಮಾಡುತ್ತಾ ಬಂದಿದ್ದೇವೆ ಆದ್ದರಿಂದ ಹಿಂದುಳಿದ ವರ್ಗದ ಪ್ರತಿಯೊಬ್ಬರು ವಿದ್ಯಾರ್ಥಿಗಳು ಮುಂದೆ ಬರಬೇಕು ಗ್ರಾಮಕ್ಕೆ ಜಿಲ್ಲೆಗೆ ಕೀರ್ತಿ ತರಬೇಕೆಂದು ಹೇಳಿದರು.
ನಂತರ ಕರ್ನಾಟಕ ರಾಜ್ಯ ಮಡಿವಾಳ ಸೇವಾ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮೈಸೂರು ರವರಾದ ಶ್ರೀ ಸತ್ಯನಾರಾಯಣರವರು ಮಡಿವಾಳ ಮಾಚಿ ಸಂಘದ ಬಗ್ಗೆ ಮಾತನಾಡಿದರು 
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಎಸ್ ಎಸ್ ಎಲ್ ಸಿ 30 ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು 
ಈ ಸಂದರ್ಭದಲ್ಲಿ ಮೇಲುಕೋಟೆ ಕ್ಷೇತ್ರ ಶಾಸಕರಾದ ದರ್ಶನ್ ಪುಟ್ಟಣ್ಣನವರು, ಗ್ರಾಮದ ಮುಖಂಡರಾದ ಜಟ್ಟಿ ಕುಮಾರ್, ಚಂದನ್, ಚೇತನ್, ಮಹಿಳಾ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಮೇಲುಕೋಟೆ ಕ್ಷೇತ್ರ ಪವಿತ್ರ ಎಸ್, ಶಿವಕುಮಾರ್ ಸಂಸ್ಥಾಪಕರು, ಅಧ್ಯಕ್ಷರು ಅಖಿಲ ಭಾರತ ಮಡಿವಾಳ.
ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಎಚ್.ಎಂ.ಜಗದೀಶ್ ಖಜಾಂಚಿ ಎಚ್.ಎಸ್ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಹಾಗೂ ವರದಿಗಾರರು ಮಡಿವಾಳ ಗರ್ಜನೆ ಕುಮಾರ್, 
ಲೆಕ್ಕಪರಿಶೋಧಕ ರವಿಕುಮಾರ್ ಎಚ್ಎಂ, ಹಾಗೂ ಸಿದ್ದರಾಜು, ಜನತಾದಳ ಪ್ರಧಾನ ಕಾರ್ಯದರ್ಶಿ ಯಾದ ಶಿವಲಿಂಗಯ್ಯ ಕೆಆರ್‌ಟಿಸಿ,
ಬೆಲ್ಲದ ಮಾದಯ್ಯ ,  ಕಡಚಿ ಪುಟ್ಟಸ್ವಾಮಿ ಶೀಲಾ,ಇತರರು ಉಪಸ್ಥಿತರಿದ್ದರು 
ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ಸಮಾಜ ಸೇವಕರು, ಮಹಿಳಾ ಹೋರಾಟಗಾರ್ತಿ, ಶ್ರೀಮತಿ ಹೆಚ್. ಏನ್ ಪ್ರಿಯರಮೇಶ್ ರವರು ನಿರೂಪಣೆ ನಿರೂಪಿಸಿದರು.  ಶೀಲಾ, ಮಂಗಳ, ಪವಿತ್ರ, ಮತ್ತು
ಗೊರವಾಲೆ  ಶ್ರೀ ಉಮಾಶಂಕರ್ ಹಾಗೂ ತಂಡದವರದಿಂದ ಎಸ್. ಜಾನಕಿ ಅವರ ಸವಿನೆನಪಿಗಾಗಿ ಗೀತಾ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು