ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಮತ್ತು ಹೆಲ್ತ್ ಫೌಂಡೇಶನ್ ವತಿಯಿಂದ ಗಡಿನಾಡ ಕವಿಗೆ ಗೌರವ ಸನ್ಮಾನ

ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಮತ್ತು ಹೆಲ್ತ್ ಫೌಂಡೇಶನ್ ವತಿಯಿಂದ ಗಡಿನಾಡ ಕವಿಗೆ ಗೌರವ ಸನ್ಮಾನ

       ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರು ಹೆಲ್ತ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ವೈದ್ಯಲೋಕ ಆರೋಗ್ಯ ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಫಲಿತಾಂಶದ ಭಾಗವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ಘೋಷಣೆಗೊಂಡಿದ್ಧು ಇದರಲ್ಲಿ ಗಡಿನಾಡು ಪಾವಗಡದ ಕವಿಗಳಾದ ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್,ರವರು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
06/09/2026 ರ ಭಾನುವಾರದಂದು ಬೆಂಗಳೂರಿನ ಮಣಿಪಾಲ್ ಸೆಂಟರ್ ಮುಳಿಯ ಗೋಲ್ಡ್ ಅಂಡ್ ಡೈಮಂಡ್  ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಗೌರವ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಲೋಕ ಪತ್ರಿಕೆಯ ಸಂಪಾದಕರಾದ ಡಾಕ್ಟರ್ ವಸುಂಧರಾ ಭೂಪತಿಯವರು ಅಲಂಕರಿಸಿದ್ಧು, ವಿಶೇಷ ಉಪನ್ಯಾಸವನ್ನು ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜಿನ ಸೂಪರಿಂಟೆಂಡೆಂಟ್ ರವರು ನಡೆಸಿಕೊಟ್ಟರು.
ವೈದ್ಯಲೋಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾಕ್ಟರ್ ಶ್ರೀ ಕೃಷ್ಣ ಮಾಯ್ಲೆಂಗಿ ಯವರು,ಸಹ ಸಂಪಾದಕರಾದ ಎನ್, ವಿ, ರಮೇಶ್ ರವರು, ಹಾಗೂ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ನ ಮೇನೇಜರ್ ಎನ್, ಸುಬ್ರಹ್ಮಣ್ಯ ಭಟ್ ರವರೂ ಸೇರಿದಂತೆ ಹಲವಾರು  ಸಾಹಿತಿಗಳು ಉಪಸ್ಥಿತರಿದ್ದರು.