ಎನ್ ಸಿ ಸಿ ಶಿಬಿರಕ್ಕೆ ಕೃಷಿ ಸಚಿವರ ಭೇಟಿ ಕೆಡೆಟ್ಸ್ ಗಳೊಂದಿಗೆ ಸಂವಾದ
ಗೌರವಾನ್ವಿತ ಕೃಷಿ ಸಚಿವರಾದ ಶ್ರೀ ನರೇಂದ್ರ ಸ್ವಾಮಿ ಅವರು ಬೆಂಗಳೂರಿನ ಯಲಹಂಕದಲ್ಲಿರುವ ಜಿಕೆವಿಕೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 1 ಕರ್ನಾಟಕ ಬೆಟಾಲಿಯನ್ ಆಯೋಜಿಸಿರುವ ಎನ್ಸಿಸಿ ( ಸಿ ಎ ಟಿ ಸಿ/ ಐಬಿಸಿ ) ಶಿಬಿರಕ್ಕೆ ಭೇಟಿ ನೀಡಿದರು.
ಭೇಟಿಯ ಸಂದರ್ಭದಲ್ಲಿ ಗೌರವಾನ್ವಿತ ಸಚಿವರು ಶಿಬಿರದಲ್ಲಿ ಭಾಗವಹಿಸುತ್ತಿರುವ ಎನ್ಸಿಸಿ ಕೆಡೆಟ್ಗಳೊಂದಿಗೆ ಸಂವಾದ ನಡೆಸಿ, ಶಿಸ್ತು, ಸಂಘಟನೆ ಮತ್ತು ನಾಯಕತ್ವದ ಗುಣ ಗಳೊಂದಿಗೆ ರಾಷ್ಟ್ರಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು.
ಗೌರವಾನ್ವಿತ ಸಚಿವರನ್ನು 1 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಹಾಗೂ ಜಿಕೆವಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೈ. ಎನ್. ಸುರೇಶ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಗೌರವಾನ್ವಿತ ಸಚಿವರ ಈ ಭೇಟಿ ಶಿಬಿರದಲ್ಲಿ ಭಾಗವಹಿಸುತ್ತಿರುವ ಎನ್ಸಿಸಿ ಕೆಡೆಟ್ಗಳಿಗೆ ಸ್ಫೂರ್ತಿದಾಯಕ ಹಾಗೂ ಸ್ಮರಣೀಯ ಅನುಭವವನ್ನು ನೀಡಿತು.