ತ್ಯಾಗ ಬಲಿದಾನಗಳ ಫಲವೇ ನಮ್ಮ ಸ್ವಾತಂತ್ರ‍್ಯ ಬಿ.ವಾಮದೇವಪ್ಪ

ತ್ಯಾಗ ಬಲಿದಾನಗಳ ಫಲವೇ ನಮ್ಮ ಸ್ವಾತಂತ್ರ‍್ಯ ಬಿ.ವಾಮದೇವಪ್ಪ

     ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ಅದಕ್ಕೆ ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ ಬಲಿದಾನವೇ ಕಾರಣ. ಹಲವು ಆಯಾಮಗಳಲ್ಲಿ ನಡೆದ ಸುದೀರ್ಘ ಸ್ವಾತಂತ್ರ್ಯ ಹೋರಾಟವು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ನುಡಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ದಾವಣಗೆರೆ ವಿನೂತನ ಮಹಿಳಾ ಸಮಾಜ, ಕದಳಿ ವೇದಿಕೆ ಹಾಗೂ ಸಂಸ್ಕಾರ ಭಾರತಿ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ದೇಶದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿ ಸಂದೇಶ ನೀಡುತ್ತಿದ್ದರು.  ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಲಾಲಾ ಲಜಪತ ರಾಯ್, ಭಗತ್ ಸಿಂಗ್, ಬಾಲಗಂಗಾಧರ ತಿಲಕ್ ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದ ಹಲವಾರು ಹೋರಾಟಗಳು ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು ಎಂದು ಬಿ.ವಾಮದೇವಪ್ಪ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತಾಡಿ ನಮ್ಮ ದೇಶದ ಏಕತೆ, ಅಖಂಡತೆ, ಶಾಂತಿ ಮತ್ತು ಪ್ರಗತಿಗಾಗಿ
ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ನಮ್ಮ ಕರ್ತವ್ಯ, ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿ ದೇಶದ ಪ್ರಗತಿಯಲ್ಲಿ ಪಾಲುದಾರರಾಗೋಣ ಎಂದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾ ಗಣೇಶ್ ಶೇಟ್,  ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲ ಶಿವಕುಮಾರ್, ಸಂಸ್ಕಾರ ಭಾರತಿ ಕರ್ನಾಟಕ-ದಾವಣಗೆರೆಯ ಜಿಲ್ಲಾಧ್ಯಕ್ಷ ಬಿ.ದಿಳ್ಯಪ್ಪ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತಾಡಿದರು.

ವಿನೂತನ ಮಹಿಳಾ ಸಮಾಜದ ಸದಸ್ಯೆಯರು ವಂದೇ ಮಾತರಂ, ರಾಷ್ಟ್ರಗೀತೆ, ನಾಡಗೀತೆಯನ್ನು ಪ್ರಸ್ತುತಪಡಿಸಿದರು. ರಾಷ್ಟ್ರಧ್ವಜಾರೋಹಣ ನಿರ್ವಹಣೆಯನ್ನು ಭಾರತ ಸೇವಾದಳದ ಸಂಪನ್ಮೂಲ ಶಿಕ್ಷಕರಾದ ಎ.ಆರ್.ಗೋಪಾಲಪ್ಪ ಹಾಗೂ ಹೆಚ್‌.ಹನುಮಂತಪ್ಪ ನೆರವೇರಿಸಿದರು. ರಾಷ್ಟ್ರದ ನಕ್ಷೆಯನ್ನು ರಂಗೋಲಿ ಮೂಲಕ ಚಿತ್ರೀಕರಿಸಿದ ಗುಣವರ್ಧನ, ಭಾರತ್ ಸೇವಾದಳದ ಎ.ಆರ್.ಗೋಪಾಲಪ್ಪ, ಹೆಚ್‌.ಹನುಮಂತಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಹಿತಿ ಪಿ.ಜಯರಾಮನ್ ಅವರು ಸ್ವಾತಂತ್ರ್ಯ ದಿನದ ಕುರಿತು ಸ್ವರಚಿತ ಕವನ ವಾಚಿಸಿದರು. ಕಸಾಪ ಜಿಲ್ಲಾ ಪದಾಧಿಕಾರಿ ಲಯನ್ ಭೈರವೇಶ್ವರ ವಂದನಾರ್ಪಣೆ ಮಾಡಿದರು‌.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು, ಸಾಹಿತಿ ಜಿ.ಕೆ.ಕುಲಕರ್ಣಿ, ಹೆಚ್.ಎನ್‌.ಶಿವಕುಮಾರ್, ಡಾ.ಎಲ್.ನಾಗೇಶಯ್ಯ, ಪರಮೇಶ್ವರಪ್ಪ ಸಿರಿಗೆರೆ, ಮರುಳಸಿದ್ದಪ್ಪ, ಎ.ಪರಮೇಶ್ವರಪ್ಪ, ಕನ್ನಡಪರ ಹೋರಾಟಗಾರ್ತಿ ಸುವರ್ಣಮ್ಮ ಶಿವಮೂರ್ತಿ, ಕೆನರಾ ಬ್ಯಾಂಕ್ ಸ್ಮಿತಾ ಕುಲಕರ್ಣಿ, ನಾಗೇಶ್ವರಿ ನಾಯರಿ, ಮಮತಾ ಕೊಟ್ರೇಶ್, ಇಂದಿರಾ ರಂಗನಾಥ ರೆಡ್ಡಿ, ಆಶಾ ನಾವುಡ, ಮಲ್ಲಿಕಾರ್ಜುನ ಸ್ವಾಮಿ, ನಾಗಭೂಷಣ್, ಪತ್ರಕರ್ತ ಬಕ್ಕೇಶ್ ನಾಗನೂರು, ಟಿ.ಎಸ್.ಶೈಲಜಾ, ಕುಸುಮ ಲೋಕೇಶ್, ರಾಜೇಶ್ವರಿ ಕೇಶವ್, ಸತ್ಯಭಾಮ ಮಂಜುನಾಥ್, ಶಶಿರೇಖಾ, ವಿದ್ಯಾಲಕ್ಷ್ಮಿ ಹರೀಶ್, ಲೀಲಾ ಶೇಖರ್, ಶಾಂತಕ್ಕ,  ಹೆಚ್‌.ಎಲ್.ಶ್ರೀನಿವಾಸ್, ಗುಣವರ್ಧನ್, ಸವಿತಾ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.