ಕಂದಾಯ ಗ್ರಾಮದ ಮೂಲ ಉದ್ದೇಶ, ಬಡವರಿಗೆ ಸೂರು ಕಲ್ಪಿಸುವುದು ಡಿ.ಸಿ. ಪ್ರಭು
ಭಾಗ್ಯನಗರ: ಬಡವರಿಗೆ ಸೂರು ಕಲ್ಪಿಸುವುದೇ ಕಂದಾಯ ಗ್ರಾಮದ ಮೂಲ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿಯೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 43 ಸಾವಿರ ಹಕ್ಕು ಪತ್ರಗಳನ್ನು ವಿತರಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆಯನ್ನು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನಿರ್ಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆದು ಕಂದಾಯ ಗ್ರಾಮಗಳ ನಿರ್ಮಾಣದ ವಿಚಾರದಲ್ಲಿ ಸಮಗ್ರ ಮಾಹಿತಿಯನ್ನು ನೀಡಿದರು, ಚಿತ್ರ ಮಾಲಿಕೆಯ ಮೂಲಕ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದರು. ಇಡೀ ಜಿಲ್ಲೆಗೆ ಒಂದು ಲಕ್ಷ ಐವತ್ತು ಸಾವಿರ ನಿವೇಶನಗಳು ಮುಂಜೂರಾಗಿದ್ದು, ಬಾಗೇಪಲ್ಲಿ ವಿಧಾನಸಭೆಗೆ ಗರಿಷ್ಠ 43 ಸಾವಿರ ಮನೆಗಳು ಮಂಜೂರಾಗಿರುವ ಬಗ್ಗೆ ಶಾಸಕ ಎಸ.ಎನ್. ಸುಬ್ಬಾರೆಡ್ಡಿಯವರನ್ನು ಶ್ಲಾಘಿಸಿದರು. ಈ ನಿವೇಶನಗಳನ್ನು ವಿತರಣೆ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಸ್ಥಳ ಅಥವಾ ಖಾಸಗಿ ಸ್ಥಳಗಳ ಬಗ್ಗೆ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸುವ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಯಾವುದೇ ಕಾರಣಕ್ಕೂ ದಾಖಲೆಗಳಲ್ಲಿ ತಪ್ಪುಗಳು ಸಂಭವಿಸದAತೆ ಜಾಗ್ರತೆ ವಹಿಸಿ, ಸ್ಥಳ ನೋಂದಾವಣೆ ಪತ್ರ, ಹಕ್ಕು ಪತ್ರ ಮತ್ತು ವಿವಿಧ ದಾಖಲೆಗಳ ಖಡತವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕ್ರಮ ವಹಿಸಬೇಕು ಎಂದು ಸಭೆಗೆ ಮಾಹಿತಿ ನೀಡಿದರು.
ಇದಕ್ಕೂ ಮುಂಚೆ ಪಟ್ಟಣದ ಪುರಸಭೆ, ರಾಜಸ್ವ ಇಲಾಖೆ ಇಲಾಖೆಗಳಿಗೆ ಬೇಟಿ ನೀಡಿ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಪಟ್ಟಣದ ಪುರಸಭೆಗೆ ಭೇಟಿ ನೀಡಿ, ಸಾರ್ವಜನಿಕರೊಬ್ಬರ ಮನೆ ನಿವೇಶನದ ಬಗ್ಗೆ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿದರು, ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಪೋನಾಯಿಸಿ ಅವರ ಸಮಸ್ಯೆಗಳನ್ನು ಆಲಿಸಿ, ಸಲಹೆ ಸೂಚನೆ ನೀಡಿದರು. ಸುಮಾರು ಎರಡು ಗಂಟೆಗೂ ಹೆಚ್ಚು ಸಮಯವನ್ನು ಪುರಸಭೆಯಲ್ಲಿ ಇದ್ದು, ಸಾರ್ವಜನಿಕರ ಕುಂದೂಕೊರತೆಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸಿದರು. ಆನಂತರ ರಾಜಸ್ವ ಇಲಾಖೆಗೆ ಭೇಟಿ ನೀಡಿದರು, ಸಾರ್ವಜನಿಕರ ಕೆಲಸಗಳು ವಿಳಂಬವಾಗದAತೆ ಅಧಿಕಾರಿಗಳಿಗೆ ಸೂಚನೆ ನೀಡಿದರು, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬಾಗೇಪಲ್ಲಿ ತಹಸೀಲ್ದಾರ್, ಮನೀಶಾ ಪತ್ರಿ, ಚೇಳೂರು ತಹಸೀಲ್ದಾರ್ ಬಿ.ಕೆ. ಶ್ವೇತ, ಗುಡಿಬಂಡೆ ತಹಸೀಲ್ದಾರ್ ಸಿಗ್ಮತ್ತುಲ್ಲಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ, ಡಿ.ಡಿ.ಎಲ್.ಆರ್. ಮಂಜುನಾಥ್, ಎ.ಡಿ.ಎಲ್.ಆರ್. ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.... ವರದಿ ಸುಬ್ಬು ಭಾಗ್ಯನಗರ