ಸೆ.12ರಂದು 44ನೇ ಸಾಹಿತ್ಯ ಪಯಣ ಹೆಜ್ಜೆ: ‘ನನ್ಸಿರಿ’ ಕಾದಂಬರಿ ವಿಶ್ಲೇಷಣೆ

ಸೆ.12ರಂದು 44ನೇ ಸಾಹಿತ್ಯ ಪಯಣ ಹೆಜ್ಜೆ: ‘ನನ್ಸಿರಿ’ ಕಾದಂಬರಿ ವಿಶ್ಲೇಷಣೆ

        ಹಾಸನ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಹಾಸನ ಜಿಲ್ಲಾ ಹಾಸನ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾರವರ ಅಧ್ಯಕ್ಷತೆಯಲ್ಲಿ ೨೦೨೬ ಸೆಪ್ಟಂಬರ್ ೧೨ ಶನಿವಾರ ಸಾಯಂಕಾಲ ೦೩ ಗಂಟೆಗೆ ಹಾಸನದ ರಿಂಗ್ ರಸ್ತೆ, ತನ್ವಿತ್ರಿಶಾ ಕಲ್ಯಾಣ ಮಂಟಪದೆದುರು ಉಡುಪಿ ಹೋಟೆಲ್ ಮೊದಲ ಮಹಡಿ ಸಭಾಂಗಣದಲ್ಲಿ ಕವಯಿತ್ರಿ ಹಾಗೂ ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ಅವರ ಪ್ರಾಯೋಜಕತ್ವದಲ್ಲಿ ೪೪ ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮವನ್ನು ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ತಿಳಿಸಿದ್ದಾರೆ.

     ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ಜಿ. ಪ್ರಕಾಶ್ ಅವರ “ನನ್ಸಿರಿ” ಕಾದಂಬರಿ ಕುರಿತು ಮಲ್ನಾಡ್ ನರ್ಸಿಂಗ್ ಹೋಂ ಖ್ಯಾತ ವೈದ್ಯರಾದ ಡಾ. ಎ. ಸಾವಿತ್ರಿಯವರು ವಿಶ್ಲೇಷಣೆ ಮಾಡಲಿದ್ದಾರೆ. ಗೋಷ್ಠಿಯಲ್ಲಿ ವೇದಿಕೆಯ ಕೇಂದ್ರ ಸಮಿತಿಯ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪದಾಧಿಕಾರಿಗಳು, ಜಿಲ್ಲೆಯ ಕವಿಗಳು ಭಾಗವಹಿಸಲಿದ್ದಾರೆ. ಕೃತಿ ವಿಮರ್ಶೆ ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ಸಾಹಿತ್ಯಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ.

        ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ -೯೪೪೯೩೧೧೨೯೮, ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ – ೯೮೮೦೮೮೯೮೮೫, ಪ್ರಾಯೋಜಕರು ಹಾಗೂ ತಾಲ್ಲೂಕು ಕಾರ್ಯದರ್ಶಿ ಸಿ.ಎನ್.ನೀಲಾವತಿ – ೯೬೨೦೪೭೯೦೭೧ ಸಂಪರ್ಕಿಸಬಹುದು.