ಸಂಜೀವಿನಿ ಕೋಲಕಾರಗೆ ಹಾಸ್ಯಕೂಟ ಸ್ಪರ್ಧೆಯಲ್ಲಿ ಬಹುಮಾನ

ಸಂಜೀವಿನಿ ಕೋಲಕಾರಗೆ ಹಾಸ್ಯಕೂಟ ಸ್ಪರ್ಧೆಯಲ್ಲಿ ಬಹುಮಾನ
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಬೆಳಗಾವಿಯ ಹಾಸ್ಯಕೂಟವು ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಹಾಸ್ಯ ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಮಾವಿನಕಟ್ಟಿಯ‌ ವಿದ್ಯಾರ್ಥಿನಿ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲಾ ಜನರನ್ನು ನಗಿಸಿ ತೃತೀಯ ಸ್ಥಾನವನ್ನು ಗಳಿಸಿದಳು, ಕಾರ್ಯಕ್ರಮದ ಅಧ್ಯಕ್ಷರು ಎಸ್.ಎ.ಸ್ವಾಮಿ,

 ಸಂಚಾಲಕರಾದ ಮಧುಕರ ಗುಂಡೇನಟ್ಟಿ, ಪ್ರಾಯೋಜಕರಾದ ಅರವಿಂದ ಕುಲಕರ್ಣಿ, ತೀರ್ಪುಗಾರರಾದ ಅರವಿಂದ ಹುನಗುಂದ ಹಾಗೂ ತಾನಾಜಿಯವರು ವಿದ್ಯಾರ್ಥಿನಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ಹಾಗೂ ಪುಸ್ತಕವನ್ನು ನೀಡಿ ಗೌರವಿಸಿದರು. ಸ್ಪರ್ಧೆಯಲ್ಲಿ ಹತ್ತು ವಿದ್ಯಾರ್ಥಿಗಳು ಭಾಗವಹಿಸಿ ನೂರಾರು ಜನ ಪ್ರೇಕ್ಷಕರನ್ನು ಮನರಂಜಿಸಿದರು. ಎಂ.ಬಿ. ಹೊಸಳ್ಳಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.