ಮುದ್ದೇಬಿಹಾಳ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ
ಮುದ್ದೇಬಿಹಾಳ: ಢವಳಗಿ ಸಮೀಪದ ಮಡಿಕೇಶ್ವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ನಡೆದ 2026-27ನೇ ಸಾಲಿನ ಮುದ್ದೇಬಿಹಾಳ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಸಸಿಗೆ ನೀರುಣಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಮ ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು, ಪ್ರಭುಗೌಡ ದೇಸಾಯಿ, ಶಿವಶಂಕರ ಹೀರೇಗೌಡರ, ಎಮ್ ಎಸ್ ಬಡದಾನಿ, ಆರ್ ಬಿ ದಮ್ಮೂರಮಠ, ಕೆ ಪಿ ಬಿರಾದಾರ, ಶಾಂತಗೌಡ ಗು ಪಾಟೀಲ, ಶಿವಣ್ಣ ಸೂ ಅಲ್ಲಾಪೂರ ಸೇರಿದಂತೆ ಮತ್ತಿತರು ಇದ್ದರು.
ಒಂದು ಉತ್ತಮ ಆರೋಗ್ಯವಂತ, ಮತ್ತು ದೈಹಿಕವಾಹಿ ಸದೃಡವಾಗಿರಬೇಕು ಅಂದರೆ ಒಳ್ಳೆಯ ಪೌಷ್ಟಿಕಾಂಶ ಆಹಾರದ ಜೋತೆ ಕ್ರೀಡಾಕೂಟದಲ್ಲಿಯೂ ನಾವು ಭಾಗವಹಿಸಬೇಕು.ಅಂದಾಗ ಮಾತ್ರ ನಾವು ದೈಹಿಕ ಮತ್ತು ಮಾನಸಿಕ ವಾಗಿವಾಗಿ ಸದೃಡವಾಗುತ್ತೆವೆ.ದೈಹಿಕ ಕ್ರೀಡೆಯಲ್ಲಿ ಅಷ್ಟೇ ಭಾಗವಹಿಸದೆ, ಮಾನಸಿಕ ಕ್ರೀಡೆ ಗಳಾದ ಚೆಸ್, ಕ್ಯಾರಂಬ್, ಗಳಂತ ಮನಸ್ಸಿನ ಕ್ರೀಡೆಯಲ್ಲಿಯೂ ಭಾಗವಹಿಸುವುದು ಮುಖ್ಯ ಎಂದು ತಾಲ್ಲೂಕು ಕ್ಷೇತ್ರ ಶೀಕ್ಷಣಾಧಿಕಾರಿ ಎಮ್ ಎಸ್ ಬಡದಾನಿ ಅವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಢವಳಗಿ ಸಮೀಪದ ಮಡಿಕೇಶ್ವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಪ್ಟೆಂಬರ್ 22 ಮಂಗಳವಾರದಂದು 2026-27ನೇ ಸಾಲಿನ ಮುದ್ದೇಬಿಹಾಳ ತಾಲ್ಲೂಕಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಭಾಗಹಿಸಿ ಮಾತನಾಡಿದರು. ಇಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಪ್ರತಿಭೆಯುಳ್ಳವರು ಆಗಿದ್ದಿರಿ, ಇಲ್ಲಿ ನಿರ್ಣಾಯಕರು ಕೊಟ್ಟ ನಿರ್ಣಯಕ್ಕೆ ತಲೆಬಾಗಿ ಮುಂದೆ ಜಿಲ್ಲಾ ಮಟ್ಟಕ್ಕೆ ಹೆಚ್ಚಿನ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಕಳಿಸಿಕೋಡಬೇಕೆಂದು ಹೇಳಿದರು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಿವಶಂಕರಗೌಡ ಹೀರೇಗೌಡರ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ ನಾವು ಸದೃಢವಾಗಿರಬೇಕೆಂದರೆ ನಮಗೆ ಊಟ ಎಷ್ಟು ಮುಖ್ಯವೋ ಅಷ್ಟೇ ಆಟವು ಮುಖ್ಯವಾಗಿದೆ. ನಮಗೆ ಊಟ, ಪಾಠದ ಜೋತೆಗೆ ಆಟವು ಇರಬೇಕು.ಇಂತಹ ಕ್ರೀಡೆಯಲ್ಲಿ ಭಾಗವಹಿಸಿರೆ ನಮ್ಮ ಮನಸ್ಸು ಹಗುರವಾಗಿರುತ್ತದೆ. ಮತ್ತು ಅವರು ಅಷ್ಟೇ ಸದೃಡವಾಗಿರುತ್ತಾರೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಾಹಿಸಿ ಮಾತನಾಡಿದ ಪರಮ ಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಯೋಗಾಶ್ರಮ ಮಡಿಕೇಶ್ವರ ಅವರು ಮತನಾಡಿ ಮಡಿಕೇಶ್ವರ ಗ್ರಾಮಕ್ಕೆ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವು ಇತಿಹಾಸ ಇದೆ.ಅಷ್ಟೇ ಇತಿಹಾಸ ಕೂಡಾ ನಮ್ಮ ಶಾಲೆಗೆ ಇದೆ. ಯಾಕೆಂದರೆ ಈ ಶಾಲೆಯು ಮೊದಲು ಕಿರಿಯ ಪ್ರಾಥಮಿಕ ಶಾಲೆ ಆಗಿತ್ತು ಒಂದು ಕಾಲದಲ್ಲಿ. ಅವತ್ತು ಈ ಶಾಲೆಗೆ ಒಬ್ಬ ಎಸ್ ಹಿಪ್ಪರಗಿ ಅಂತ ಶಿಕ್ಷಕರು ನಮ್ಮ ಶಾಲೆಗ ಬಂದರು ಅವರು ಬರಿ ಶಿಕ್ಷಕರು ಆಗಿ ಬರಲಿಲ್ಲ ಅವರು ನಮ್ಮ ಶಾಲೆ ಮತ್ತು ನಮ್ಮ ಊರನ್ನು ಉದ್ದಾರ ಮಾಡಲು ಬಂದರು ಅವರ ಒಂದು ಕಠಿಣ ಶ್ರಮದಿಂದ ಇವತ್ತು ನಾವು ನಮ್ಮೂರಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ನಡೆಸಿಕೊಡಲು ಸಾಧ್ಯವಾಗಿದೆ ಎಂದು ಎಸ್ ಹಿಪ್ಪರಗಿ ಅವರನ್ನು ಸ್ಮರಿಸಿದರು. ಪ್ರತಿಯೋಬ್ಬ ಶಿಕ್ಷಕರಿಗೂ ಸಮಾಜದಲ್ಲಿ ತಮ್ಮದೆ ಆದ ಒಳ್ಳೆಯ ಗೌರವ ಇದೆ. ಅದು ತಾವು ಮಕ್ಕಳಿಗೆ ಕಲಿಸಿ ಕೊಡುವ ಒಳ್ಳೆಯ ಶಿಕ್ಷಣದಿಂದ ಇದೆ.
ಬಾಕ್ಸ್:- ಒಂದು ಶಾಲೆ ಪ್ರಗತಿಯೊಂದಬೇಕಾದರೆ ಆ ಶಾಲೆಯ ಮುಖ್ಯ ಗುರುಗಳು ಕಾರಣ ಆಗುತ್ತಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಶಾಲಾ ಶಿಕ್ಷಕರು ಕಾರಣರಾಗುತ್ತಾರೆ. ಒಂದು ಶಾಲೆಯ ಅಳಿವು ಮತ್ತು ಉಳಿವು ಆ ಶಾಲೆಯ ಶಿಕ್ಷಕರ ಮೇಲೆ ನಿಂತಿರುತ್ತದೆ. ಒಳ್ಳೆಯ ಶಿಕ್ಷಕರಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ನೀವು ಹೆಚ್ಚಿನ ರಿಸ್ಕ್ ತೆಗದುಕೋಳ್ಳಬೇಕು ಎಂದು ಮಾತನಾಡಿದರು. ವೇದಿಕೆಯ ಮೇಲೆ ಶಿಕ್ಷಣಾಧಿಕಾರಿ ಎಮ್ ಎಸ್ ಬಡದಾನಿ ಅವರಿಗೆ ಇತ್ತೀಚಿಗೆ ಸರಕಾರಿ ಶಾಲೆಗಳು ಮುಚ್ಚುತ್ತಿವೆ.ಆದರೆ ನಮ್ಮ ತಾಲೂಕಿನಲ್ಲಿ ಯಾವುದೇ ಒಂದು ಶಾಲೆ ಮುಚ್ಚಲಾರದ ಹಾಗೆ ನೋಡಿಕೋಳ್ಳಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಉತ್ತಮ ಭೋದನೆಗಾಗಿ ಹೆಚ್ಚು ರಿಸ್ಕ್ ತೆಗದುಕೊಳ್ಳಬೇಕು ಎಂದು ಅವರಿಗೆ ಹೇಳಿದರು.
ಸಹಕಾರ ನೀಡಿದ ಢವಳಗಿ ಬಸವ ಬಾಲ ಭಾರತಿ ಶಾಲೆಯ ಮುಖ್ಯ ಗುರುಗಳು:- ಸಪ್ಟೆಂಬರ್ 21 ರಂದು ರಾತ್ರಿ ಮಡಿಕೇಶ್ವರ ದಲ್ಲಿ ಮಳೆ ಆದ ಪ್ರಯುಕ್ತ ಖೋಖೋ ಮೈದಾನದಲ್ಲಿ ಕೆಸರು ಆದ ಹಿನ್ನೆಲೆಯಲ್ಲಿ ಆಟವಾಡಲು ಮೈದಾನ ಇಲ್ಲದ ಕಾರಣಕ್ಕಾಗಿ ಢವಳಗಿ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಾಲವಾದ ಮೈದಾನ ಇರುವುದರಿಂದ ಮಧ್ಯಾಹ್ನ 3-30 ಗಂಟೆಯಿಂದ ಗಂಡುಮಕ್ಕಳ ಖೋಖೋ, ಎತ್ತರ ಜಿಗಿತ, ಉದ್ದ ಜಿಗಿತ, ರನ್ನಿಂಗ್ ಆಟಗಳನ್ನು ಆಡಿಸಿದರು.ಆಟಕ್ಕೆ ಬೇಕಾದ ಎಲ್ಲಾ ರೀತಿಯ ಅನುಕೂಲ ವನ್ನು ಶಾಲೆಯ ಮುಖ್ಯ ಗುರುಗಳಾದ ರಮೇಶ ಮೂಲಿಮನಿ ಅವರು ಸಹಕಾರ ನೀಡಿದರು.
ಅತಿಥಿಗಳಾಗಿ ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ, ಕೆ ಪಿ ಬಿರಾದಾರ, ಶಾಂತಗೌಡ ಪಾಟೀಲ, ಶಿವಣ್ಣ ಅಲ್ಲಾಪೂರ, ಬಿ ಎಚ್ ಮುದ್ನೂರ, ಎನ್ ಬಿ ಪಿಂಜಾರ, ವ್ಹಿ ಸಿ ಕೆರೂರ, ಬಿ ಟಿ ವಜ್ಜಲ,ಡಾ.ಚೇತನ ಬಾಗೇವಾಡಿ ವೈದ್ಯಾಧಿಕಾರಿ ಮಡಿಕೇಶ್ವರ, ದೈಹಿಕ ಶಿಕ್ಷಣ ಪರೀವಿಕ್ಷಕರಾದ ಎಸ್ ಬಿ ಕುಂಬಾರ, ಕ್ಷೇತ್ರ ಸಮನ್ವಯಾಧಿಕಾರಿಗಳು ಆರ್ ಬಿ ದಮ್ಮೂರಮಠ, ಸಹಾಯಕ ನಿರ್ದೇಶಕರಾದ ಡಾ.ಎಮ್ ಎಮ್ ಬೆಳಗಲ್, ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬಸಮ್ಮ ಬಿ ರೂಡಗಿ ಸೇರಿದಂತೆ ಇನ್ನಿತರರು ಇದ್ದರು. ಮಹೇಶ ಕೋಣ್ಣುರ ಕ್ರೀಡಾಪಟುಗಳಿಗೆ ಮತ್ತು ದೈಹಿಕ ಶಿಕ್ಷಕರಿಗೆ ಪ್ರಮಾಣ ವಚನ ಬೋಧಿಸಿದರು.ಶ್ರೀಮತಿ ಅಂಬಿಕಾ ಕರಕಪ್ಪಗೋಳ, ಬಿ ಎಸ್ ಹಂಚಲಿ ಅವರು ನಿರೂಪಿಸಿದರು.ಶಾಂತಲಾ ಪಾಟೀಲ ವಂದಿಸಿದರು. ಸ್ಥಳೀಯ ಶಾಲೆಯ ದೈಹಿಕ ಶಿಕ್ಷಕ ರಮೇಶ ಮಠಪತಿ, ಸಿಆರ್ ಪಿ ಗಳು ಸೇರಿದಂತೆ ಅನೇಕ ಶಿಕ್ಷಕರು ಪಾಲ್ಗೊಂಡಿದ್ದರು.
ಬಾಕ್ಸ್:- ತಾಳಿಕೋಟಿ ಮಾರ್ಗದ ಡಾಂಬರ್ ರಸ್ತೆಯಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯನ್ನು ಬಿಟ್ಟಿದ್ದರು. ವಿದ್ಯಾರ್ಥಿ ಓಟದ ಬರದಲ್ಲಿ ಆಯಾ ತಪ್ಪಿ ಬಿದ್ದು ಕೈಕಾಲುಗಳಿಗೆ ಗಾಯಗಳಾದ ಪರಿಣಾಮವಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಮಕ್ಕಳ ಪರವಾಗಿ ನಿಂತು ವ್ಯಯಕ್ತಿಕ ಕ್ರೀಡೆಗಳನ್ನು ಬಂದ್ ಮಾಡಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್ ಬಿ ಕುಂಬಾರ ಮಾತನಾಡಿ ಹೆಣ್ಣು ಮಕ್ಕಳ ಖೋಖೋ, ರನ್ನಿಂಗ್, ಮತ್ತು ರೀಲೆ ಆಟವನ್ನು ಮುಂದೆ ನಿರ್ಧಾರ ಮಾಡಿಸಿ ಸೂಕ್ತ ಮೈದಾನದಲ್ಲಿ ಆಡಿಸಲಾಗುತ್ತದೆ ಎಂದು ಹೇಳಿದರು.