ಶಶಿಲ್ ನಮೋಶಿಯವರು ಸಜ್ಜನ ರಾಜಕಾರಣಿಯಾಗಿದ್ದಾರೆ: ಬಂಡೆಪ್ಪ ಖಾಶೆಂಪುರ್

ಶಶಿಲ್ ನಮೋಶಿಯವರು ಸಜ್ಜನ ರಾಜಕಾರಣಿಯಾಗಿದ್ದಾರೆ: ಬಂಡೆಪ್ಪ ಖಾಶೆಂಪುರ್

ಬೀದರ್ (ಅ.18): ಶುಶೀಲ್ ನಮೋಶಿಯವರು ಸಜ್ಜನ ರಾಜಕಾರಣಿಯಾಗಿದ್ದಾರೆ. ಈಗಾಗಲೇ ನಾಲ್ಕು ಬಾರಿ ಗೆದ್ದಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್ಡಿಎ ಮಿತ್ರ ಪಕ್ಷದ ಅಭ್ಯರ್ಥಿಯಾಗಿರುವ ಶಶಿಲ್ ನಮೋಶಿರವರ ಪರವಾಗಿ ಬೀದರ್ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಶಿಲ್ ನಮೋಶಿಯವರು ಎಲ್ಲರಿಗೂ ಗೊತ್ತಿರುವವರಾಗಿದ್ದಾರೆ. ಸಾಕಷ್ಟು ಕೆಲಸಗಳನ್ನು ಅವರು ಮಾಡಿದ್ದಾರೆ. ಆಗಾಗಿ ಎಲ್ಲಾ ಶಿಕ್ಷಕರು ಸೇರಿ ಅವರನ್ನು ಬಾರಿ ಬಹುಮತದಿಂದ ಗೆಲ್ಲಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿಗಳ ಪರವಾಗಿ ಒಳ್ಳೆಯ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಮತಗಳಿವೆ. ದಸರಾ ರಜೆ ಇರುವುದರಿಂದ ಮತದಾರರ ಮನೆಗಳಿಗೆ ತೆರಳಿ ಅವರನ್ನು ಸಂಪರ್ಕಿಸಿ ಮತಯಾಚನೆ ಮಾಡುವ ಕೆಲಸವನ್ನು ನಮ್ಮ ಎನ್ಡಿಎ ಮುಖಂಡರು ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿಯಲ್ಲೇ ಮುಳುಗಿ ಶಿಕ್ಷಣ ಇಲಾಖೆಯನ್ನೇ ಮರೆತುಬಿಟ್ಟಿದೆ:
ಶಿಕ್ಷಕರ ವಿಧಾನಸಭಾ ಕ್ಷೇತ್ರ ಎಂಬುದು ಬಹಳಷ್ಟು ಮುಖ್ಯವಾದದ್ದಾಗಿದೆ. ಈ ದಿನಗಳಲ್ಲಿ ನಾವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ಆದರೇ ಈ ಸರ್ಕಾರ ಬಂದು ಮೂರುವರೆ ನಾಲ್ಕು ವರ್ಷ ಆದ್ರು ಗ್ಯಾರಂಟಿ ಜಪದಲ್ಲೇ ಮುಳುಗಿ ಶಿಕ್ಷಣ ಇಲಾಖೆಯನ್ನೇ ಮರೆತುಬಿಟ್ಟಿದೆ. ರೈತರ ಬಗ್ಗೆ ಚಿಂತನೆ ಮಾಡ್ತಿಲ್ಲ. ಮಹಿಳಾ ಸಬಲೀಕರಣದ ಬಗ್ಗೆಯೂ ಯೋಚನೆ ಮಾಡ್ತಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗ್ಬೇಕಿತ್ತು. ಶಿಕ್ಷಕರ ನೇಮಕಾತಿ ಸೇರಿದಂತೆ ಬಹುತೇಕ ಕೆಲಸಗಳು ಆಗ್ತಿಲ್ಲ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಒಂದೇ ದಿನದಲ್ಲಿ ಸುಮಾರು ಐದು ನೂರು ಪ್ರೌಢ ಶಾಲೆಗಳನ್ನು ಪ್ರಾರಂಭ ಮಾಡಲಾಗಿತ್ತು. ಕಳೆದ ಸರ್ಕಾರದಲ್ಲಿ ಸುಮಾರು ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭ ಮಾಡಲಾಗಿತ್ತು. ಆದರೇ ಈಗಿನ ಸರ್ಕಾರ ಕೆಲಸ ಮಾಡುವುದಿರಲಿ, ಇರೋ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಕೂಡ ವಿಫಲವಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.
ಕಾಂಗ್ರೆಸ್ ನವ್ರು ನಾಲ್ಕು ಕ್ಷೇತ್ರಗಳಲ್ಲಿ ಸೋಲ್ತಾರೆ:
ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ನವ್ರು ನಾಲ್ಕು ಕಡೆಗಳಲ್ಲಿ ಸೋಲ್ತಾರೆ ಎಂಬ ಗ್ಯಾರಂಟಿ ನಮಗೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿನ ಎರಡು ನೂರ ಹತ್ತು ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಅಂತ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಗಳಿಗೆ ನಿದ್ದೆ ಹೇಗೆ ಬರ್ತಿದೆ ಅಂತ ನಮಗೆ ತಿಳಿತಿಲ್ಲ.
ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸಹಾಯ ಮಾಡುವ ಕೆಲಸ ಮಾಡ್ಬೇಕಿದ್ದ ನಿಮ್ಮ ಕೈ ಎಲ್ಲೋಗಿದೆ. ದಿಲ್ಲಿಯಲ್ಲಿ ಬಿಟ್ಟು ಬಂದಿದ್ದಿರೇನು? ಒಂದು ವರ್ಷಕ್ಕೆ ಒಂದರಿಂದ ಒಂದುವರೆ ಲಕ್ಷ ಕೋಟಿ ಸಾಲ ಮಾಡಿ ಸರ್ಕಾರ ನಡೆಸುತ್ತಿದ್ದಿರಿ. ರೈತರ ಸಲುವಾಗಿ ಐವತ್ತು ಸಾವಿರ ಕೋಟಿ ಸಾಲ ತೆಗೆದುಕೊಳ್ಳಿ ಅದನ್ನು ರೈತರಿಗೆ ಉಪಯೋಗ ಮಾಡಿ. ಯಡಿಯೂರಪ್ಪ, ಕುಮಾರಸ್ವಾಮಿರವರು ಅಧಿಕಾರದಲ್ಲಿದ್ದಾಗ ಹೇಗೆ ರೈತರ ಸಾಲಮನ್ನಾ ಮಾಡಿದ್ರು ಆ ರೀತಿ ಮಾಡ್ರಿ ಎಂದು ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರಕ್ಕೆ ಸಲಹೆ ನೀಡಿದರು.
ಎಲ್ಲಾ ಶಿಕ್ಷಕರು ರೈತರ ಮಕ್ಕಳಿದ್ದಿರಿ ಆಗಾಗಿ ನಾನು ಎಲ್ಲಾ ಶಿಕ್ಷಕರಿಗೆ ಕಳಕಳಿಯಿಂದ ಮನವಿ ಮಾಡಿಕೊಳ್ತಿನಿ. ಮತದಾನದ ಮುಖಾಂತರ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುವ ಸಮಯ ಬಂದಿದೆ. ಶಿಕ್ಷಕರು ಮತದಾನದ ಮೂಲಕ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.