ಬೆಳ್ಳಟ್ಟಿ ಶ್ರೀಗಳಿಗೆ ನಾಗರಮಡುವು ಗ್ರಾಮದ PSI ಬಣಕಾರ ಕುಟುಂಬದಿಂದ 59 ನೇ ತುಲಾಭಾರ ಸಂಭ್ರಮ

ಬೆಳ್ಳಟ್ಟಿ ಶ್ರೀಗಳಿಗೆ ನಾಗರಮಡುವು ಗ್ರಾಮದ PSI ಬಣಕಾರ ಕುಟುಂಬದಿಂದ 59 ನೇ ತುಲಾಭಾರ ಸಂಭ್ರಮ

          ಬೆಳ್ಳಟ್ಟಿ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಕ್ಷೇತ್ರ ಬೆಳ್ಳಟ್ಟಿ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದ ಕ್ಷೇತ್ರಾದೀಪತಿಗಳು, ಪ್ರವಚನ ಪಿತಾಮರು, ಅನುಷ್ಠಾನಮೂರ್ತಿಗಳು ಆದ ಶ್ರೀ ಮ. ನೀ. ಪ್ರ ಬಸವರಾಜ   ಮಹಾಸ್ವಾಮಿಗಳವರಿಗೆ ನಾಗರಮಡುವು ಗ್ರಾಮದ ಪಿ ಎಸ್ ಐ ಪ್ರಕಾಶ ಬಣಕಾರ ಕುಟುಂಬದವರಿಂದ ಶ್ರೀಗಳಿಗೆ 59 ನೇ ತುಲಾಭಾರ ಸಂಭ್ರಮ ಅತ್ಯಂತ ವೈಭವದಿಂದ ಅದ್ದೂರಿಯಾಗಿ ಜರುಗಿತು.ಶ್ರೀಮಠದ ಸೇವಾರ್ತಿಗಳಾದ PSI ಪ್ರಕಾಶ ಬಣಕಾರ ಅವರು  ತಮ್ಮ ಕುಟುಂಬದ ಸಂಸ್ಕೃತಿ ಹಾಗೂ ಭಕ್ತಿಪೂರ್ವಕವಾಗಿ ಶ್ರೀಗಳಿಗೆ ತುಲಾಭಾರ ಸೇವೆ ಸಲ್ಲಿಸಿದರು.ಇದೆ ಶುಭ ಸಂದರ್ಭದಲ್ಲಿ ತಮ್ಮ ಮಕ್ಕಳಾದ ಕುಮಾರ ವಿಹಾನ ಮತ್ತು ಕುಮಾರಿ ವಿಹಾರಿಕಾ ಅವರ ಉಡದಟ್ಟಿ ಕಾರ್ಯಕ್ರಮವು ಸುಂದರವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗ್ರಾಮದ ಸಮಸ್ತ ಭಕ್ತರು, ಬಂಧುಗಳು, ಹಿತೈಷಿಗಳು ಕಾರ್ಯಕ್ರಮ ನೋಡಿ ಸಂತಸಪಟ್ಟು ಶ್ರೀಗಳ ಆಶೀರ್ವಾದ ಪಡೆದರು.