ಕಬ್ಬು ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ಕಚುಸಾಪ ಬೆಂಬಲ

ಕಬ್ಬು ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ಕಚುಸಾಪ ಬೆಂಬಲ

ಹಾವೇರಿ:-ಸುದೀರ್ಘ ಎರಡು ದಿನಗಳಕಾಲ ರಾಷ್ಟ್ರೀಯ ಹೆದ್ದಾರಿ ಬಂದ ಮಾಡಿ ಇದೀಗ ಸಂಸದ ಪ್ರಲ್ಹಾದ ಜೋಸಿಯವರ ಹುಬ್ಬಳ್ಳಿ ಮನೆಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತ ಹಾವೇರಿ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ.


        ಈ ಕುರಿತು ಕಚುಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕೃಷಿ ಸಲಹೆಗಾರ ಡಾ.ಗಂಗಯ್ಯ ಎಸ್ ಕುಲಕರ್ಣಿ ಮಾತನಾಡಿ ಒಂದೆಡೆ ಹವಾಮಾನದ ವೈಫರೀತ್ಯದಿಂದ ಮುಂಗಾರು ಮುನಿಸಿಕೊಂಡು ನೀರಿನ ಕೊರತೆಯಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ ಮತ್ತೊಂದೆಡೆ ರಾಸಾಯನಿಕ ಗೊಬ್ಬರದ ದರ ಹೆಚ್ಚಳ ಹಾಗೂ ಒಟ್ಟಾರೆ ಕೃಷಿ ಅದಿಕ ವೆಚ್ಚದಿಂದ ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಹಗಲಿರುಳು ಮಳೆ-ಚಳಿ -ಬಿಸಿಲನ್ನು ಲೆಕ್ಕಿಸದೆ ಶ್ರಮವಹಿಸಿ ದುಡಿದು ಮಾಡುತ್ತೀರುವ ಕಬ್ಬು ಬೆಳೆಗಾರರ ಹೋರಾಟ ಖಂಡಿತವಾಗಲು ನ್ಯಾಯಯುತವಾಗಿದೆ.ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಬೇಡಿಕೆಯನ್ನು ಈಡೇರಿಸಿ ಸಂಕಷ್ಟದಿಂದ ಮುಕ್ತ ಮಾಡಬೇಕು ಎಂದರು. ಜಿಲ್ಲಾಧ್ಯಕ್ಷರಾದ ವಿರೂಪಾಕ್ಷ ಲಮಾಣಿ, ಹಿರಿಯ ಕೃಷಿಕ ಶೇಖರಗೌಡ ಪಾಟೀಲ, ಸಲಹಾಸಮೀತಿ ಅಧ್ಯಕ್ಷ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ, ಸವಣೂರ ಘಟಕದ ಅಧ್ಯಕ್ಷರಾದ ನಿಂಗಪ್ಪ ಅರೇರ, ಗುತ್ತಲ ಹೋಬಳಿ ಘಟಕದ ಅಧ್ಯಕ್ಷ ವಿಕಾಸ ಹಿರೇಮಠ ಮುಂತಾದವರು ಕಬ್ಬು ಬೆಳೆಗಾರರ ಸಮಸ್ಯ ಶೀಘ್ರದಲ್ಲೇ ಇತ್ಯರ್ತ ಮಾಡಲೇಬೇಕೆಂದು ಒತ್ತಾಯಿಸಿದ್ದಾರೆ.