ಸಮಾಜ ಸೇವಕ, ಸಂಘಟಕ ಕೆ.ಎಂ. ಶ್ರೀನಿವಾಸ ಅವರಿಗೆ ಗೌರವ ಸನ್ಮಾನ
ಹಾಸನ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ. ಶ್ರೀನಿವಾಸ್ ಅವರ ಸಾಮಾಜಿಕ, ಸಂಘಟನಾತ್ಮಕ ಸೇವೆಯನ್ನು ಪರಿಗಣಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲೂಕು ಘಟಕ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಹಾಸನ ತಾಲೂಕು ದ್ವಿತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಕೊಟ್ರೇಶ್. ಎಸ್. ಉಪ್ಪಾರ್ ಸಮ್ಮೇಳನದ ಸರ್ವಾಧ್ಯಕ್ಷರಾದ ಹರಿಹರಪುರ ಶ್ರೀಧರ್, ಪೂರ್ಣಪ್ರಜ್ಞ ಇನ್ ಫಾಸ್ಟ್ರಾಕ್ಚರ್ ಮಾಲೀಕರಾದ ಕಂಚಮಾರನಹಳ್ಳಿ ಕೆ.ಆರ್. ಲಕ್ಷ್ಮಿಕಾಂತ್, ಟೈಮ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಕೆ. ಮಂಜಯ್ಯ, ತಾಲೂಕು ಪ್ರಥಮ ಸಮ್ಮೇಳನದ ಸರ್ವ ಅಧ್ಯಕ್ಷರಾದ ಸುಕನ್ಯ ಮುಕುಂದ, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ತಾಲೂಕು ಅಧ್ಯಕ್ಷ ಕೆ.ಸಿ.ಗೀತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.