ಇನ್ಮುಂದೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನೂತನ ಖಾಕಿ ವಿಸಿಲ್ ಗಾರ್ಡ್ ಅಳವಡಿಸಿಕೊಳ್ಳುವಂತೆ ಡಿಜಿ ಆದೇಶ!

ಇನ್ಮುಂದೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನೂತನ ಖಾಕಿ ವಿಸಿಲ್ ಗಾರ್ಡ್ ಅಳವಡಿಸಿಕೊಳ್ಳುವಂತೆ ಡಿಜಿ ಆದೇಶ!

ಬೆಂಗಳೂರು:ನ.11. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ಗಳು ಹಳೆ ಕಾಲದ ವಿಸಿಲ್ ಚೈನ್ ಬದಲಾಗಿ ಖಾಕಿ ಬಣ್ಣದ ನೂತನ ಲ್ಯಾನ್ ಗಾರ್ಡ್ ಅಳವಡಿಸಿಕೊಳ್ಳುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಾದ ಎಂ.ಎ.ಸಲೀಂರವರು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಆದೇಶಿಸಿದ್ದಾರೆ!

ಪೊಲೀಸ್ ಸಿಬ್ಬಂದಿಗಳ ಸಮವಸ್ತ್ರದಲ್ಲಿರುವ ಮೆಟಲ್ ವಿಜ್ಜಲ್ ಚೈನ್ ಗಳು ಹವಮಾನ ವೈಪರಿತ್ಯಗಳಿಂದ ತುಕ್ಕು ಹಿಡಿದು ಬೇಗನೆ ಹಾಳಾಗುವುದರಿಂದ ಸಮವಸ್ತ್ರಗಳಿಗೆ ತುಕ್ಕು ಹರಡಿ ಕಲೆ ಗಟ್ಟಿಯಾಗಿ ಉಳಿದು ಸಮವಸ್ತ್ರಕ್ಕೆ ಅಂಟಿಕೊಂಡು ಸಮವಸ್ತ್ರಗಳು ಹಾಳಾಗುವುದರೊಂದಿಗೆ ದೇಹಕ್ಕೆ ಹರಡಿ ಚರ್ಮರೋಗ ಸೇರಿದಂತೆ ಇತರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿರುವುದ್ದರಿಂದ ಇಂತಹ ದುಷ್ಪರಿಣಾಮಗಳನ್ನು ಮನಗಂಡ ದೇಶದ ಇತರೆ ರಾಜ್ಯಗಳು ಪೊಲೀಸ್ ಇಲಾಖೆಗಳು ತಮ್ಮ ರಾಜ್ಯಗಳ ಕೆಳಸಿಬ್ಬಂದಿಗಳ ಸಮವಸ್ತ್ರದಲ್ಲಿರುವ ಮೆಟಲ್ ವಿಜ್ಜಲ್ ಚೈನ್ ಬದಲಿಸಿ ಕೆಲವು ರಾಜ್ಯಗಳು ಖಾಕಿ ಬಣ್ಣದ ಇನ್ನೂ ಕೆಲವು ರಾಜ್ಯಗಳು ನೀಲಿ ಬಣ್ಣದ ವಿಜ್ಜಲ್ ಗಾರ್ಡ್‌ ನ್ನು  ನೀಡಲಾಗಿದ್ದು ಅದರಂತೆ ರಾಜ್ಯ ಪೊಲೀಸ್ ಇಲಾಖೆಯ ಕೆಳಸಿಬ್ಬಂದಿಗಳಿಗೂ ನೀಡುವುದು ಅಗತ್ಯವಾಗಿರುವುದ್ದರಿಂದ ಇಲಾಖೆಯ ಕೆಳಸಿಬ್ಬಂದಿಗಳ ಆರೋಗ್ಯ ಮತ್ತು ಅನುಕೂಲಕರ ಹಿತದೃಷ್ಟಿಯಿಂದ ಪ್ರಸ್ತುತದ ಕಾಲಮಾನಕ್ಕನುಗುಣವಾಗಿ ಪೊಲೀಸ್ ಇಲಾಖೆಯ ಕೆಳಸಿಬ್ಬಂದಿಗಳಿಗೆ ಸಮವಸ್ತ್ರದೊಂದಿಗೆ ನೀಡಿರುವ ನೇವಿ ಬ್ಲೂ ಪೀಕ್ಸ್ ಟೋಪಿಗೆ ಹೊಂದಾಣಿಕೆಯಾಗುವ ಬಣ್ಣದ ಅಥವಾ ಇಲಾಖೆಯು ಆಯ್ದ ಬಣ್ಣದ ವಿಜ್ಜಲ್ ಗಾರ್ಡ್ ಗಳನ್ನು ನೀಡುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದೇಶದ ಇತರೆ ರಾಜ್ಯಗಳ ಪೊಲೀಸ್ ಇಲಾಖೆಯ ಕೆಳಸಿಬ್ಬಂದಿಗಳ ಸಮವಸ್ತ್ರಗಳಿಗೆ ವಿಜಲ್ ಗಾರ್ಡ್ ಹಾಗೂ ಮ್ಯಾಟ್ ಫಿನಿಶ್ ಬಟನ್ ಗುಂಡಿಗಳನ್ನು ಅಳವಡಿಸಿಕೊಂಡಿರುವ ಭಾವಚಿತ್ರಗಳನ್ನು ಲಗತ್ತಿಸುವ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಗೃಹ ಇಲಾಖೆಗೆ ಪೊಲೀಸ್ ಡಿಜಿ ಮತ್ತು ಐಜಿಪಿರವರಿಗೆ ನಿರಂತರ ಪತ್ರ ಬರೆದು ಒತ್ತಾಯಿಸಿದ್ದರು!

ಈ ಕುರಿತು ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಘೋಷಿಸಿದರು!

ತಮ್ಮ ಪತ್ರವನ್ನು ಪರಿಗಣಿಸಿ ಅನುಷ್ಠಾನಗೊಳಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಮೋಹನ್ ಕುಮಾರ್ ದಾನಪ್ಪನವರು ಅಭಿನಂದನೆ ವ್ಯಕ್ತಪಡಿಸಿದರು