ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಯಶಸ್ವಿ

ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಯಶಸ್ವಿ

      ಮುದ್ದೇಬಿಹಾಳ: ಪಟ್ಟಣದ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆಯ ಅಂಗವಾಗಿ ಸಪ್ಟೆಂಬರ್ 27 ರವಿವಾರದಂದು  ಪೂರ್ವಭಾವಿ ಸಭಯನ್ನು ಪಟ್ಟಣದ ಶ್ರೀ ಕನಕದಾಸ ಶಾಲಾ ಆವರಣದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.   ಸಭೆಯಲ್ಲಿ ಪೂಜ್ಯರು,  ಹಾಲುಮತ ಸಮಾಜದ ಅಧ್ಯಕ್ಷರು,  ಸಮಾಜದ ಹಿರಿಯರು, ಸದಸ್ಯರು ಹಾಗೂ ಯುವಕರು ಸೇರಿದಂತೆ ವಿವಿಧ ವರ್ಗದ ಮುಖಂಡರು ಭಾಗವಹಿಸಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಲಹೆ–ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ  ಮಾಜಿ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯನವರಿಂದ‌ ಲೋಕಾರ್ಪಣೆ ಮಾಡಿಸಬೇಕು ಎಂಬ ಕೂಗು ಕೇಳಿದ ಹಿನ್ನೆಲೆಯಲ್ಲಿ. ಅವರನ್ನು ಭೇಟಿಯಾಗಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸುವ ಕುರಿತು ಚರ್ಚಿಸಲಾಯಿತು.ಮಾಜಿ ಮುಖ್ಯಮಂತ್ರಿಗಳು ಮೂರ್ತಿ ಲೋಕಾರ್ಪಣೆಗೆ ಒಪ್ಪಿಗೆ ನೀಡಿದ ಕೂಡಲೇ ಅವರು  ದಿನಾಂಕ ನೀಡಿದ ನಂತರ, ಇಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡು, ಎಲ್ಲರ ಸಹಕಾರದೊಂದಿಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಅದ್ಧೂರಿ ಹಾಗೂ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
  ಸಂಗೊಳ್ಳಿ ರಾಯಣ್ಣನವರ ಶೌರ್ಯ, ದೇಶಭಕ್ತಿ ಹಾಗೂ ತ್ಯಾಗದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದರು. ಇದೇ ವೇಳೆಯಲ್ಲಿ ಪೂಜ್ಯರು, ಸಮಾಜದ ಮುಖಂಡರು, ಯುವಕರು,ಪಾಲ್ಗೊಂಡಿದ್ದರು.