ರಾಜ್ಯ ಮಟ್ಟದ ಚುಟುಕು ರಚನಾ ಸ್ಪರ್ಧೆಯಲ್ಲಿ ವೀರಭದ್ರಪ್ಪ ಶಿವಶರಣಗೆ ಮೊದಲ ಸ್ಥಾನ

ರಾಜ್ಯ ಮಟ್ಟದ ಚುಟುಕು ರಚನಾ ಸ್ಪರ್ಧೆಯಲ್ಲಿ ವೀರಭದ್ರಪ್ಪ ಶಿವಶರಣಗೆ ಮೊದಲ ಸ್ಥಾನ

     ಕೊಡಗಿನ ಓಂ ಕಾವೇರಿ ಸಾಹಿತ್ಯ ವೇದಿಕೆ ವತಿಯಿಂದ 24/08/2026 ರಂದು ಆಶ್ವಾಸನೆ ವಿಷಯದ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ಆನ್ಲೈನ್ ಚುಟುಕು ರಚನಾ ಸ್ಪರ್ಧೆಯಲ್ಲಿ ಪಾವಗಡದ ಕವಿಗಳಾದ ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ ಎಸ್ ರವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀಯುತರು ಈಗಾಗಲೇ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿರುವುದಲ್ಲದೆ ಪ್ರಸ್ತುತ ಐದನೇ ಕೃತಿ ಕಾವ್ಯ ಗೊಂಚಲು ಮುದ್ರಣ ಹಂತದಲ್ಲಿದ್ಧು ಸದ್ಯದಲ್ಲೇ ಓದುಗರ ಕೈಸೇರಲಿದೆ.ಇವರು ಹಲವಾರು ಸಾಹಿತ್ಯ ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದು ಇವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಗಳಿಗೆ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.