ವರದಾ ನದಿಯಲಿ ಸಿದ್ದಾರೊಡ, ಕಲ್ಮೇಶ್ವರ ತೇರು ಬಲು ಜೋರು

ವರದಾ ನದಿಯಲಿ ಸಿದ್ದಾರೊಡ, ಕಲ್ಮೇಶ್ವರ ತೇರು ಬಲು ಜೋರು
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಹಾವೇರಿ :-ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಸುಕ್ಷೇತ್ರ ಕೋಣನತಂಬಗಿ ಗ್ರಾಮದ ವರದಾ ನದಿಯಲ್ಲಿ ಶ್ರೀ ಸಿದ್ದಾರೂಢ ಹಾಗೂ ಶ್ರೀ ಕಲ್ಮೇಶ್ವರ ದೇವರ ತೆಪ್ಪೋತ್ಸವ ಸಂಭ್ರಮ ನೂಲ ಹುಣ್ಣಿಮೆ ದಿನವಾದ ಇಂದು ಅತ್ಯಂತ ವೈಭವದಿಂದ ಜರುಗಿತು.

ತೆಪ್ಪೋತ್ಸವದ ಅಂಗವಾಗಿ 7 ದಿನಗಳ ಕಾಲ ನಿರಂತರ ಓಂ ನಮ: ಶಿವಾಯ ಎಂಬ ಶಿವನಾಮ ಸ್ಮರಣೆ ಮಾಡಿ ದೇವರಿಗೆ ಅಭಿಷೇಕ ಪೂಜೆ ಜರುಗಿತು. ಮಧ್ಯಾಹ್ನ 4 ಗಂಟೆಗೆ ಹರಿಯುವ ವರದೆಯಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿತು. ಪಕ್ಕದ ಗ್ರಾಮ ನದಿ ನೀರಲಗಿ ಭಕ್ತರು ಪೂಜೆ ಸಲ್ಲಿಸಿದರು. ತೆಪ್ಪಕ್ಕೆ ಸೇಳ್ಳು ಕಟ್ಟಿ ಭಕ್ತರು ಈಜುತ್ತಾ ತೇರನ್ನು ಎಳೆಯುವ ದೃಶ್ಯ ರೋಮಾಂಚನಕಾ ರಿಯಾಗಿತ್ತು. ಜಿಲ್ಲೆ, ರಾಜ್ಯ ಹಾಗೂ ಅಂತರರಾಜ್ಯಗಳಿಂದ ಬಂದ ಸಾವಿರಾರು ಭಕ್ತರು ತೆಪ್ಪೋತ್ಸವ ನೋಡಿ ಸಂತಸಗೊಂಡರು. ನಂತರ ಊರ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಇತ್ಯಾದಿ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು.

ಬರಗಾಲದ ಸಂರ್ದಬದಲ್ಲೂ ಅತ್ಯಂತ ವೈಭವದಿಂದ ಜರುಗಿತು. ಭಕ್ತರು ಉತ್ತಮ ಮಳೆ -ಬೆಳೆ ಬರಲೆಂದು ಭಕ್ತಿಪೂರ್ವ ಕವಾಗಿ ಪ್ರಾರ್ಥಿಸಿದರು.

ಭಕ್ತರೆಲ್ಲ ಗೋದಿಹುಗ್ಗಿ, ಬದನೆಕಾಯಿ ಪಲ್ಲೆ ಹಾಗೂ ಅನ್ನ ಪ್ರಸಾದ ಸ್ವೀಕರಿಸಿ ಸಂಭ್ರಮಿಸಿದರು.