50 ವರ್ಷಗಳಿಂದ ಜಮೀನಿಗಾಗಿ ಅಲೆದ ಬಡ ವೃದ್ಧ ರೈತರ ಪರ ನಿಂತ ದರಖಾಸ್ತು ಕಮಿಟಿ ಸದಸ್ಯ ಕೆ.ಸಿ.ಚಂದ್ರಶೇಖರರೆಡ್ಡಿ

50 ವರ್ಷಗಳಿಂದ ಜಮೀನಿಗಾಗಿ ಅಲೆದ ಬಡ ವೃದ್ಧ ರೈತರ ಪರ ನಿಂತ ದರಖಾಸ್ತು ಕಮಿಟಿ ಸದಸ್ಯ ಕೆ.ಸಿ.ಚಂದ್ರಶೇಖರರೆಡ್ಡಿ
ಬಾಕ್ಸ್ ಸುದ್ದಿ :-- ತಹಸೀಲ್ದಾರ್  ಮನೀಶಾ ಮಹೇಶ್ಅ ಪತ್ರಿ ಅವರ ಭರವಸೆಯಿಂದ ಐದು ದಶಕಗಳಿಂದ ಜಮೀನಿನ ಹಕ್ಕಿಗಾಗಿ ಕಾಯುತ್ತಿರುವ ರಾಮಸ್ವಾಮಿಪಲ್ಲಿ ಗ್ರಾಮದ 80ಕ್ಕೂ ಹೆಚ್ಚು ರೈತರಲ್ಲಿ ಇದೀಗ ಆಶಾಭಾವನೆ ಮೂಡಿದೆ.ಸರ್ವೇ ನಂ.31 ಮತ್ತು 39ಕ್ಕೆ ಸಂಬAಧಿಸಿದ ಹಳೆಯ ಕಡತಗಳನ್ನು ಪತ್ತೆಹಚ್ಚಿ, ನಮೂನೆ–53ರ ಅರ್ಜಿಗಳು, ಕಿಮ್ಮತ್ತು ಪಾವತಿ ರಸೀದಿಗಳು ಹಾಗೂ ಇತರ ಪುರಾವೆ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿಯಮಾನುಸಾರ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ಸಂಧರ್ಭದಲ್ಲಿ ರಾಮಸ್ವಾಮಿಪಲ್ಲಿ ಗ್ರಾಮಸ್ಥರಾದ ಕೃಷ್ಣಾರೆಡ್ಡಿ, ಸುಧಾಕರ್,ಬೈರೆಡ್ಡಿ,ವೆಂಕಟ

     ಭಾಗ್ಯನಗರ: ಶಾಸಕರ ಆದೇಶದಂತೆ ಬಡ ರೈತರೊಂದಿಗೆ ಇಂದು ತಹಸೀಲ್ದಾರ್ ಕಚೇರಿಗೆ ತೆರಳಿ, ರೈತರ ಸಮಸ್ಯೆ ಕುರಿತು ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ರೈತರು ಸಲ್ಲಿಸಿರುವ ಅರ್ಜಿಗಳು ಹಾಗೂ ಪುರಾವೆ ದಾಖಲೆಗಳನ್ನು ಪರಿಶೀಲಿಸಿ, ಆದಷ್ಟು ಶೀಘ್ರದಲ್ಲಿ ಪ್ರಾಮಾಣಿಕವಾಗಿ ಕ್ರಮ ಕೈಗೊಂಡು ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದಾರೆ ಎಂದು ದರಖಾಸ್ತು ಕಮಿಟಿ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಕುರವಪಲ್ಲಿ ಕೆ.ಸಿ.ಚಂದ್ರಶೇಖರರೆಡ್ಡಿ ತಿಳಿಸಿದ್ದಾರೆ.

ತಾಲ್ಲೂಕು ಆಡಳಿತ ಕಚೇರಿ ತಹಸೀಲ್ದಾರ್ ಮನೀಶಾ ಮಹೇಶ್ ಪತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ರಾಮಸ್ವಾಮಿಪಲ್ಲಿ ಗ್ರಾಮದ ಬಡ ರೈತರು ಸುಮಾರು 50 ವರ್ಷಗಳಿಂದ ಜಮೀನು ಮಂಜೂರಾತಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಕೈಯಲ್ಲಿ ನಮೂನೆ–53ರ ಅರ್ಜಿ, ಸರ್ಕಾರಕ್ಕೆ ಪಾವತಿಸಿದ ಕಿಮ್ಮತ್ತು ಹಣದ ರಸೀದಿ ಹಾಗೂ ಇತರೆ ಪುರಾವೆ ದಾಖಲೆಗಳು ರೈತರ ಬಳಿ ಇರುತ್ತವೆ ಆದರೆ.? ಆಗಿನ ತಹಸೀಲ್ದಾರ್ ಕಚೇರಿಯಲ್ಲಿ ರೈತರ ಮೂಲ ದಾಖಲಾತೆಗಳು ಇಲ್ಲದ ಕಾರಣಜಮೀನು ಮಂಜೂರು ಮಾಡುವ ಪ್ರಕ್ರಿಯೆನ್ನು ಮುಂದುಡುತ್ತಾ ಬಂದಿರುತ್ತಾರೆ.

ಚೇಳೂರು ತಾಲ್ಲೂಕಿನ ರಾಶ್ಚರುವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸ್ವಾಮಿಪಲ್ಲಿ ಗ್ರಾಮದ 80ಕ್ಕೂ ಹೆಚ್ಚು ರೈತರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮವು ಹಿಂದೆ ಬಾಗೇಪಲ್ಲಿ ತಾಲ್ಲೂಕು ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ, ಹಲವು ವರ್ಷಗಳಿಂದ ತಾವು ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮೀನುಗಳಿಗೆ ರೈತರು ನಮೂನೆ–53ರಲ್ಲಿ ದರಖಾಸ್ತು ಅರ್ಜಿ ಸಲ್ಲಿಸಿ, ಸರ್ಕಾರಕ್ಕೆ ಕಿಮ್ಮತ್ತು ಹಣ ಹಾಗೂ ಟಿ.ಟಿ. ಹಣ ಪಾವತಿಸಿ ರಸೀದಿಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿ ದಶಕಗಳು ಕಳೆದರೂ ಜಮೀನು ಮಂಜೂರಾಗಿಲ್ಲ. ಅರ್ಜಿಗಳ ಸ್ಥಿತಿಗತಿ ತಿಳಿದುಕೊಳ್ಳಲು ರೈತರು ಹಲವು ಬಾರಿ ತಾಲ್ಲೂಕು ಕಚೇರಿಗೆ ತೆರಳಿದಾಗ “ಕಡತ ಕಾಣುತ್ತಿಲ್ಲ, ಸಿಗುತ್ತಿಲ್ಲ” ಎಂಬ ಉತ್ತರ ಸಿಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇದರಿAದ ವಯಸ್ಸಾದ ಬಡ ರೈತರು ಕೂಲಿ ಕೆಲಸ ಬಿಟ್ಟು, ಹಣ ಹಾಗೂ ಸಮಯ ವ್ಯಯಿಸಿಕೊಂಡು ಪದೇಪದೇ ತಾಲ್ಲೂಕು ಕಚೇರಿಗೆ ಅಲೆದಾಡುವಂತಾಗಿದೆ. ರೈತರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ, ಹಳೆಯ ಕಡತಗಳನ್ನು ಪತ್ತೆಹಚ್ಚಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.