ದೇಶದ ಮೇಲಿನ ‘ದಿಮಾಗಿ ನಕ್ಸಲಿಸಂ’ ಮತ್ತು ವೈಚಾರಿಕ ಆಕ್ರಮಣದ ವಿರುದ್ಧ ಸಂಘಟಿತರಾಗಲು ಮೋಹನ್ ಗೌಡ ಕರೆ

ದೇಶದ ಮೇಲಿನ ‘ದಿಮಾಗಿ ನಕ್ಸಲಿಸಂ’ ಮತ್ತು ವೈಚಾರಿಕ ಆಕ್ರಮಣದ ವಿರುದ್ಧ ಸಂಘಟಿತರಾಗಲು ಮೋಹನ್ ಗೌಡ ಕರೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಭಾರತದ ಮೇಲೆ ಇಂದು ಕೇವಲ ಭೌತಿಕ ಆಕ್ರಮಣಗಳಲ್ಲದೆ, ಅತ್ಯಂತ ಅಪಾಯಕಾರಿಯಾದ ‘ವೈಚಾರಿಕ ಆಕ್ರಮಣ’ ಮತ್ತು ‘ದಿಮಾಗಿ ನಕ್ಸಲಿಸಂ’ (Intellectual Naxalism) ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜವು ಜಾಗೃತಗೊಂಡು ಸಂಘಟಿತವಾಗಬೇಕಾದ ತುರ್ತು ಅಗತ್ಯವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ ಮೋಹನ್ ಗೌಡ ಅವರು ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಲ್ಲೇಖಿಸಿದ ‘ದಿಮಾಗಿ ನಕ್ಸಲಿಸಂ’ ಶಬ್ದವು ಇಂದು ಸಮಾಜದಲ್ಲಿ ಅರ್ಬನ್ ನಕ್ಸಲಿಸಂ ರೂಪದಲ್ಲಿ ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ ಎಂದು ಎಚ್ಚರಿಸಿದರು. ಕಾಡಿನ ನಕ್ಸಲಿಸಂ ಅನ್ನು ಸರ್ಕಾರ ಬುಡಸಮೇತ ಕಿತ್ತೊಗೆದಿದೆ, ಆದರೆ ನಗರಗಳಲ್ಲಿ ‘ಇಂಟಲೆಕ್ಚುವಲ್ ಟೆರರಿಸಂ’ ಮೂಲಕ ಯುವಜನತೆಯನ್ನು ದಾರಿ ತಪ್ಪಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದರು.