ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಎಂ ಪಕ್ಷದಿಂದ ದ್ವಿಚಕ್ರವಾಹನಗಳ ತಳ್ಳುಪ್ರದರ್ಶನ
ಭಾಗ್ಯನಗರ: ಕೇಲವೇ ದಿನಗಳಲ್ಲಿ ಇಂಧನ ದರಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸತತವಾಗಿ ಏರಿಕೆಮಾಡಿದೆ,ಇದರಿಂದಾಗಿ ನಿರಂತರ ಬೆಲೆ ಏರಿಕೆಯು ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಭಾರೀ ಹೊರೆಯಾಗಲಿದೆ ಎಂದು ಆರೋಪಿಸಿ ಸಿ.ಪಿ.ಐ (ಎಂ) ಪಕ್ಷದ ಕಾರ್ಯದರ್ಶಿ ರಘುರಾಮರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಡಾ ಎಚ್. ಎನ್ ವೃತ್ತದಿಂದ ಪೆಟ್ರೋಲ್, ಡೀಸೆಲ್ ಹಾಗೂ ಸಿ ಎನ್ ಜಿ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ದ್ವಿಚಕ್ರ ವಾಹನಗಳ ತಳ್ಳು ಪ್ರದರ್ಶನ ಮಾಡುವ ಮೂಲಕ ಪಟ್ಟಣದ ಡಿ ವಿ ಜಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದನ ಬಳಿ ಇರುವ ಮಾಜಿ ಶಾಸಕ ಜಿ. ವಿ.ಶ್ರೀರಾಮರೆಡ್ಡಿ ಪುತ್ಥಳಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ದ್ವಿಚಕ್ರ ವಾಹನಗಳ ತಳ್ಳುಪ್ರದರ್ಶನ ಮಾಡಿದರು.
ನಂತರ ಮಾತನಾಡಿದ ಸಿ.ಪಿ.ಐ (ಎಂ) ಪಕ್ಷದ ಕಾರ್ಯದರ್ಶಿ ರಘುರಾಮರೆಡ್ಡಿ,ಪ್ರಧಾನಿ ನರೇಂದ್ರ ಮೋದಿ ಈ ದೇಶದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಸುಮಾರು 12 ವರ್ಷಗಳಿಂದ ಎಲ್ಲದರ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡಿದು ಸರ್ಕಾರ ನಡೆಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ಕೇವಲ 11 ದಿನಗಳಲ್ಲಿ ನಾಲ್ಕು ಭಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ನಮ್ಮ ಸಿ.ಪಿ.ಐ (ಎಂ) ಪಕ್ಷ ತೀವ್ರವಾಗಿ ಖಂಡಿಸುತ್ತದೆ, ಮುಖ್ಯವಾಗಿ ಜನಸಾಮಾನ್ಯರ ಮತ್ತು ರೈತರ ದೈನಂದಿನ ಜೀವನಕ್ಕೆ ಹೊರೆಯಾಗಿರುವ ಈ ದರ ಹೆಚ್ಚಳವನ್ನು ಬಿಜೆಪಿ ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಅಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಸಿ.ಪಿ.ಐ (ಎಂ) ಮುಖಂಡ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ,ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ರಾಂಪ್ ಜೊತೆ ಒಪ್ಪಂದ ಮಾಡಿಕೊಂಡು ಇಂಧನ ದರಗಳನ್ನು ಪದೇ ಪದೇ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಜನರಿಗೆ ' ಸ್ಲೋ ಪಾಯ್ಸನ್' ನೀಡುತ್ತಿದೆ ಪೆಟ್ರೋಲ್, ಡೀಸೆಲ್ ಹಾಗೂ ಸಿ ಎನ್ ಜಿ ದರ ಹೆಚ್ಚಳದಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಧರ್ಭದಲ್ಲಿ ಸಿ.ಪಿ.ಎಂ ಪಕ್ಷದ ಮುಖಂಡರಾದ ಚನ್ನರಾಯಪ್ಪ,ಡಿ. ಅಶ್ವಥ್ ನಾರಾಯಣ, ಡಿ.ಟಿ.ಮುನಿಸ್ವಾಮಿ,ಜಿ.ಕೃಷ್ಣಪ್ಪ,ದೇವಿಕುಂಟೆ ಶ್ರೀನಿವಾಸ್,ಸೋಮ ಶೇಖರ್,ಗಣೇಶ್ ,ರಾಮಚಂದ್ರ,ಉತ್ತಣ್ಣ,ಆದಿನಾರಾಯಣ,ರಾಮಾಂಜಿ,ಅಬ್ಬುಭಕರ್,ಶ್ರೀನಿವಾಸ್ ರೆಡ್ಡಿ,ಸೋಮಶೇಖರ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು..
What's Your Reaction?