ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೀಜ ವಿತರಣೆ. FID ಮತ್ತು ಆಧಾರ ಕಾರ್ಡ್ ಕಡ್ಡಾಯ.
ಢವಳಗಿ:- ಗ್ರಾಮದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರದಂದು ಮುಂಗಾರು ಹಂಗಾಮಿನ ಬೀಜಗಳಾದ ತೋಗರಿ, ಹೆಸರು, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು. ವಿತರಣೆ ಮಾಡಿ ಮಾತನಾಡಿದ ಕೃಷಿ ಅಧಿಕಾರಿ ಗೋವಿಂದರೇಡ್ಡಿ ಮೆದಕಿನಾಳ ಅವರು ನಮ್ಮಲ್ಲಿ ಬೀಜಗಳು ಸ್ಟಾಕ್ ಇವೆ. ರೈತರು ಕೃಷಿ ಇಲಾಖೆಗೆ ಬರುವಾಗ FID ನಂಬರ್ ಮತ್ತು ಆಧಾರ ಕಾರ್ಡ್ ನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಹಾಗೂ ಮನೆಯಲ್ಲಿರುವ ತೋಗರಿ ಬೀಜಕ್ಕೆ ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದು ಹೇಳಿದರು. ಇದೆ ವೇಳೆಯಲ್ಲಿ ಸಿಬ್ಬಂದಿಗಳಾದ ಸಂಗಮೇಶ ಸಜ್ಜನ, ಸಂಗಮೇಶ ಚೌದ್ರಿ, ಶರಣು ಪಾಟೀಲ, ನಾಗರಾಜ ಹಳಬರ, ಸಂಗನಗೌಡ ರಬಿನಳ್ಳಿ, ಭಾರತಿ ಮೀಸಿ, ವಿಜಯಲಕ್ಷ್ಮಿ ಬಿರಾದಾರ ಹಾಗೂ ರೈತರಾದ ಸಿದ್ದಪ್ಪ ಕಲ್ಲಪ್ಪಗೊಳ್,
ಶಿವಪ್ಪ ಗುಂಡಲಗೇರಿ, ಬಸಮ್ಮ ವಾಲಿಕಾರ, ನಿಂಗಮ್ಮ ಬೀರಗೊಂಡ, ಭೀಮನಗೌಡ ಹ ಮೇಟಿ, ಶಾಂತಗೌಡ್ ಬಿರಾದಾರ, ಸೇರಿದಂತೆ ಇನ್ನಿತರರು ಇದ್ದರು.
What's Your Reaction?