ಹುಟ್ಟು ಹಬ್ಬವನ್ನು ಕಾರ್ಯಕರ್ತರ ಜೊತೆಗೆ ಸರಳವಾಗಿ ಆಚರಣೆ ಮಾಡಿಕೊಂಡರು ಮಾಜಿ ಶಾಸಕ ಎಚ್ ಪಿ ರಾಜೇಶ್

ಹುಟ್ಟು ಹಬ್ಬವನ್ನು ಕಾರ್ಯಕರ್ತರ ಜೊತೆಗೆ ಸರಳವಾಗಿ ಆಚರಣೆ ಮಾಡಿಕೊಂಡರು ಮಾಜಿ ಶಾಸಕ ಎಚ್ ಪಿ ರಾಜೇಶ್

ಜಗಳೂರು ಸುದ್ದಿ:-ತಮ್ಮ ಹುಟ್ಟುಹಬ್ಬಕ್ಕೆ ರೋಗಿಗಳಿಗೆ ಹಣ್ಣು ವಿತರಣೆ ಮಾಡಬೇಕಾದರೆ ರೋಗಿಗಳನ್ನು ವಿಚಾರಿಸಿದ್ದು ವಿಶೇಷವಾಗಿತ್ತು.ರೋಗಿಗಳನ್ನು ನೀವು ಯಾವ ಕಾಯಿಲೆಗೆ ಬಂದಿದ್ದೀರಿ,ನಿಮಗೆ ಈ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯದ ವ್ಯವಸ್ಥೆಗಳು ಇದೆಯೇ, ಇಲ್ಲಿ ಸರಿಯಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆಯೇ, ಜೊತೆಗೆ ಔಷಧ ಉಪಚಾರಗಳನ್ನುನೀಡುತ್ತಿದ್ದಾರೆಯೇ ಎಲ್ಲವನ್ನು ಆಸ್ಪತ್ರೆಯ  ರೋಗಿಗಳ ಬಳಿ ಕೇಳಿದರು. ಡಾಕ್ಟರ್ ಅನ್ನು ಕರೆಸಿ ಬಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡಿ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್ ಪಿ ರಾಜೇಶ್ ಕ್ಷೇತ್ರದ ಜನರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನನ್ನ ಹುಟ್ಟುಹಬ್ಬವನ್ನು ಈ ವರ್ಷ ಬಾಳ ಸರಳತೆಯಿಂದ ಆಚರಣೆ ಮಾಡಿ ಕೊಳ್ಳುತ್ತಿದ್ದೇನೆ.ಕಾರಣ ನಮ್ಮ ಕ್ಷೇತ್ರದಲ್ಲಿ ಬರಗಾಲ ರೈತರು ತಮ್ಮ ಹೊಲಗಳಿಗೆ ಬಿತ್ತನೆ ಮಾಡಿದ್ದಾರೆ.ಇನ್ನು ಕೆಲವರು ಬಿತ್ತನೆಗೆ ಸಜ್ಜಾಗಿದ್ದಾರೆ.ಆದರೆ ಸರಿಯಾದ ಸಮಯಕ್ಕೆ ಮಳೆ ಬಾರದೆ ರೈತರು ಕಂಗಲಾಗಿದ್ದಾರೆ. 57 ಕೆರೆಗಳಿಗೆ ನೀರು ಬರುತ್ತಿವೆ.ಮುಂದಿನ ದಿನಗಳಲ್ಲಿ ಬೋರ್ವೆಲ್ ಗಳಲ್ಲಿ ಉತ್ತಮ ರೀತಿಯಿಂದ ನೀರು ಬರುತ್ತವೆ.ಮಳೆ ಬಾರದ ಹಿನ್ನೆಲೆಯಲ್ಲಿ ಸರಳವಾಗಿ ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಕೊಳ್ಳುತ್ತಿದ್ದೇನೆ.ಇದೇ ವೇಳೆ ಅಭಿಮಾನಿಗಳಿಂದ ಶುಭಹಾರೈಕೆಗಳನ್ನು ಸ್ವೀಕರಿಸಿ ವಿವಿಧ ಹಳ್ಳಿಗಳಿಂದ ಬಂದ ಕಾರ್ಯ ಕರ್ತರಿಗೆ ಹಾಗೂ ಪಕ್ಷದ ಅಭಿಮಾನಿಗಳಿಗೆ ಧನ್ಯವಾದಗಳು ಹೇಳಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಕಾನನಕಟ್ಟೆ ಪ್ರಭು,ಸೂರಲಿಂಗಪ್ಪ,ಶಿವಕುಮಾರಸ್ವಾಮಿ, ಭೈರೇಶ್,ಬಿ.ಲೋಕೇಶ್ ಬಸವಾಪುರ ರವಿಚಂದ್ರ, ಗಿರೀಶ್ ಒಡೆಯರ್,ಎಸ್.ಎನ್ ತಿಪ್ಪೇಸ್ವಾಮಿ, ತಮಲೇಹಳ್ಳಿ ಮಾರುತಿ,ನಾಗರಾಜ್,ರೇವಣ್ಣ, ತಿಮ್ಮರಾಯಪ್ಪ,ಸಿದ್ದಪ್ಪ,ಅಂಜಿನಪ್ಪ,ರಮೇಶ್,ಸಿದ್ದಪ್ಪ,ರಾಜಣ್ಣ,ವೆಂಕಟೇಶ್,ಶ್ರೀನಿವಾಸ್,ಮಂಜು, ಪರಶುರಾಮ್,ಅನಿಲ್,ಮದಕರಿ,ಸ್ವಾಮಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು,ಅಭಿಮಾನಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾರಿದ್ದರು.

12 ಜೆಎಲ್ಆರ್ 02 61 ನೇ ವರ್ಷದ ಹುಟ್ಟುಹಬ್ಬವನ್ನು ರೋಗಿಗಳಿಗೆ ಬ್ರೆಡ್,ಹಣ್ಣು ನೀಡುವ ಮುಖಾಂತರ ಸರಳವಾಗಿ ಆಚರಣೆ ಮಾಡಿಕೊಂಡ ಹೆಚ್ ಪಿ ರಾಜೇಶ್ ಮಾಜಿ ಶಾಸಕ.