ಕೆ.ಜಿ.ಎಫ್ ತಾಲ್ಲೂಕು 45 ವರ್ಷಗಳ ಕಾಲ ಒತ್ತುವರಿಯಾಗಿದ್ದ ಸರ್ಕಾರಿ ಸ್ಮಶಾನದ ಜಾಗ ಯಶಸ್ವಿಯಾಗಿ ತೆರವು

ಕೆ.ಜಿ.ಎಫ್ ತಾಲ್ಲೂಕು 45 ವರ್ಷಗಳ ಕಾಲ ಒತ್ತುವರಿಯಾಗಿದ್ದ ಸರ್ಕಾರಿ ಸ್ಮಶಾನದ ಜಾಗ ಯಶಸ್ವಿಯಾಗಿ ತೆರವು

    ಕೆ.ಜಿ.ಎಫ್ : ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಕುರುಬೂರು ಗ್ರಾಮಕ್ಕೆ ಸೇರಿದ ಸರ್ಕಾರಿ ಸ್ಮಶಾನದ ಜಾಗವು ಕೊನೆಗೂ ಒತ್ತುವರಿಯಿಂದ ಮುಕ್ತವಾಗಿದೆ.
ಹಿನ್ನೆಲೆ ಮತ್ತು ಹೈಕೋರ್ಟ್ ಆದೇಶ:
ಕುರುಬೂರು ಗ್ರಾಮದ ಸರ್ವೆ ನಂಬರ್ 32 ರಲ್ಲಿದ್ದ, 1 ಎಕರೆ 1 ಗುಂಟೆ ವಿಸ್ತೀರ್ಣದ ಈ ಸ್ಮಶಾನದ ಜಾಗವನ್ನು ಇದೇ ಗ್ರಾಮದ ಸಿ.ಕೆ. ವೆಂಕಟರಾಮರೆಡ್ಡಿ ಎಂಬುವವರು ಕಳೆದ 45 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು. ಈ ಕುರಿತು 1988 ರಲ್ಲೇ ಮಾನ್ಯ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಅಧಿಕಾರಿಗಳ ಶ್ರಮ ಮತ್ತು ಡಿಸಿ ಆದೇಶ:
ಹೈಕೋರ್ಟ್ ಆದೇಶದ ಅನ್ವಯ, ಗ್ರಾಮ ಆಡಳಿತಾಧಿಕಾರಿ (VA) ಮುರಳಿ, ಕಂದಾಯ ನಿರೀಕ್ಷಕರು (RI) ಮಂಜುನಾಥ್ ಹಾಗೂ ತಹಸೀಲ್ದಾರ್ ಹೆಚ್.ಜೆ. ಭರತ್ ಮತ್ತು ಸಹಾಯಕ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪ್ರಪೋಸಲ್ ಕಳುಹಿಸಿದ್ದರು. ಈ ಪ್ರಪೋಸಲ್ ಅನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳಾದ ಎಂ. ರವಿ ರವರು ಪಹಣಿಯಲ್ಲಿ (RTC) ಇದನ್ನು "ಸರ್ಕಾರಿ ಸ್ಮಶಾನ" ಎಂದು ನಮೂದು ಮಾಡಿ, ಒತ್ತುವರಿ ತೆರವುಗೊಳಿಸಲು ಕಡಕ್ ಆದೇಶ ಹೊರಡಿಸಿದರು.

ಕೆ.ಆರ್.ಎಸ್ ಪಕ್ಷ ಹಾಗೂ ಗ್ರಾಮಸ್ಥರ ಜಂಟಿ ಕಾರ್ಯಾಚರಣೆ:
ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ, ದಿನಾಂಕ 07-07-2026 ರಂದು ಕೆ.ಆರ್.ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ಪದಾಧಿಕಾರಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಒಟ್ಟಾಗಿ ಸೇರಿ ಸ್ಮಶಾನ ಜಾಗದ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.

ಮಾರ್ಗದರ್ಶನ ಮತ್ತು ನಾಯಕತ್ವ: ಕೆ.ಆರ್.ಎಸ್ ಪಕ್ಷದ ಗೌರವಾಧ್ಯಕ್ಷರಾದ ಮಾನ್ಯ ಶ್ರೀ ರವಿ ಕೃಷ್ಣಾರೆಡ್ಡಿ ರವರ ಮಾರ್ಗದರ್ಶನದಲ್ಲಿ, ಪಕ್ಷದ ಕೋಲಾರ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಮತ್ತು ಪ್ರಮುಖ ಕಾರ್ಯಕರ್ತರಾದ, ಮರಳಿ ರೆಡ್ಡಿ. ಮಧುಸೂದನ್ ರೆಡ್ಡಿ, ಪ್ರಕಾಶ್ ರೆಡ್ಡಿ. ಶ್ರೀನಿವಾಸ್ ರೆಡ್ಡಿ  ಈ ಹೋರಾಟದ ಮುಂಚೂಣಿಯಲ್ಲಿದ್ದರು.
ಬೆಂಬಲ ನೀಡಿದ ಅಧಿಕಾರಿಗಳು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಸಂಗಮೇಶ್ ಹಾಗೂ ಸಿಬ್ಬಂದಿ ವರ್ಗ, ಪಂಚಾಯಿತಿಯ ಶಶಿಕುಮಾರ್ ಹಾಗೂ ಸಿಬ್ಬಂದಿ ಒತ್ತುವರಿ ತೆರವು ಕಾರ್ಯಕ್ಕೆ ಸಂಪೂರ್ಣ ರಕ್ಷಣೆ ಮತ್ತು ಸಹಕಾರ ನೀಡಿದರು.
ಗ್ರಾಮಸ್ಥರ ಭಾಗಿತ್ವ: ಕುರುಬೂರು ಗ್ರಾಮದ ಪ್ರಮುಖರಾದ ಕೆ. ಶ್ರೀನಿವಾಸರೆಡ್ಡಿ, ಶ್ರೀರಾಮರೆಡ್ಡಿ, ಸುಬ್ರಮಣಿ, ಬಾಲರೆಡ್ಡಿ, ಪಂಚಾಯಿತಿ ಮೆಂಬರ್ ಶ್ರೀನಿವಾಸ್, ರಘುಪ್ಪ, ರಮೇಶ್, ಬಾಬು ಸೇರಿದಂತೆ ಗ್ರಾಮದ ಸಮಸ್ತ ಸಾರ್ವಜನಿಕರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಅಂತಿಮ ಫಲಿತಾಂಶ:
ಎಲ್ಲರ ನಿರಂತರ ಹೋರಾಟ, ಶ್ರಮ ಮತ್ತು ಕಂದಾಯ ಇಲಾಖೆಯ ಸಹಕಾರದಿಂದಾಗಿ 45 ವರ್ಷಗಳ ಸುದೀರ್ಘ ಒತ್ತುವರಿ ಸಮಸ್ಯೆ ಇಂದಿಗೆ ಕೊನೆಗೊಂಡಿದೆ. ಇದರಿಂದಾಗಿ ಕುರುಬೂರು ಗ್ರಾಮಸ್ಥರಿಗೆ ಶವಸಂಸ್ಕಾರ ಮಾಡಲು ಇದ್ದ ಜಾಗದ ಸಮಸ್ಯೆ ಬಗೆಹರಿದಂತಾಗಿದ್ದು, ಸಾರ್ವಜನಿಕ ಬಳಕೆಗೆ ಹಾದಿ ಸುಗಮವಾಗಿದೆ. ಎಂದು ಗ್ರಾಮಸ್ಥರು. ಹರ್ಷ ವ್ಯಕ್ತಪಡಿಸಿದರು.