ಡಿಎಆರ್‌ನಲ್ಲಿ ೧೨ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆ

ಡಿಎಆರ್‌ನಲ್ಲಿ ೧೨ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆ

ಕೆಜಿಎಫ್.೧೨ನೇ ಅಂತರರಾಷ್ಟಿಯ ಯೋಗ ದಿನಾಚರಣೆಯನ್ನು ಕೆಜಿಎಫ್‌ನ ಡಿಎಆರ್ ಮೈದಾನದಲ್ಲಿ ಭಾನುವಾರದಂದು ಬೆಳಿಗ್ಗೆ ಸಂಭ್ರಮದಿAದ ಆಚರಿಸಲಾಯಿತು.

ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ೨೦೧೫ ರಿಂದ ಆಚರಿಸಿಕೊಂಡು ಬರುತ್ತಿದ್ದು ಯೋಗವು ವ್ಯಾಯಾಮದ ಒಂದು ಪರಿಣಾಮಕಾರಿ ರೂಪವಾಗಿದೆ, ದೇಹ ಮತ್ತು ಮನಸ್ಸು ಎರಡನ್ನೂ ನಿಯಂತ್ರಣದಲ್ಲಿಡುತ್ತದೆ. ಪೊಲೀಸರಿಗೆ ಇರುವಂತಹ ಒತ್ತಡವನ್ನು ತೊಡೆದುಹಾಕಲು ಯೋಗವು ಏಕೈಕ ಪರಿಹಾರವಾಗಿದೆ, ದಿನವಿಡೀ ಯೋಗಕ್ಕೆ ಕೇವಲ ೩೦ ನಿಮಿಷಗಳನ್ನು ಮೀಸಲಿಟ್ಟಲ್ಲಿ, ಅದು ದೇಹ ಮತ್ತು ಮನಸ್ಸಿಗೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ ಹಾಗೂ ಪೊಲೀಸರ ಕುಟುಂಬದವರು ಸಹ ತಮ್ಮ ಮನೆಯವರ ಜೊತೆ ದಿನನಿತ್ಯ ಚಟುವಟಿಕೆಗಳಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಯೋಗ ದಿನಾಚರಣೆಯಲ್ಲಿ ರಾಬರ್ಟಸನ್‌ಪೇಟೆಯ ಪತಾಂಜಲಿ ಯೋಗ ಸೇವ ಸೆಂಟರ್ ವತಿಯಿಂದ ರಮೇಶ್ ಕುಮಾರ್ ಹಾಗೂ ಶಿವಕುಮಾರ್ ರವರು ಯೋಗಾಭ್ಯಾಸವನ್ನು ಹೇಳಿಕೊಟ್ಟರು.

ಡಿಎಆರ್ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಆರ್‌ಪಿಐ ಸೋಮಶೇಖರ್ ಅವರು ಉಸ್ತುವಾರಿ ವಹಿಸಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

ಚಿತ್ರ ಶಿರ್ಷಿಕೆ : ೨೧ಕೆಜಿಎಫ್‌೦೧ : ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್‌ಪಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷö್ಮಯ್ಯ.ವಿ, ಯೋಗ ಗುರುಗಳಾದ ರಮೇಶ್ ಕುಮಾರ್ ಹಾಗೂ ಶಿವಕುಮಾರ್ ಇತರರು.