30ನೇ ವಾರ್ಡ್ ಮಸ್ಕಂ ಗ್ರಾಮವನ್ನು ಕಡಗನಿಸಿರುವ ನಗರಸಭೆ

30ನೇ ವಾರ್ಡ್ ಮಸ್ಕಂ ಗ್ರಾಮವನ್ನು ಕಡಗನಿಸಿರುವ ನಗರಸಭೆ

     ಕೆಜಿಎಫ್: ಮಸ್ಕಾಂ ಗ್ರಾಮವನ್ನು ನಗರಸಭೆ ವಾರ್ಡಿಗೆ ಸೇರಿ ಸುಮಾರು ಐವತ್ತು ವರ್ಷ ಕಳೆದಿದೆ. ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಇಂದಿಗೂ ಸಹ ಮಸ್ಕಂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ.
 ಹೈ ಮಸ್ಟ್  ಲೈಟು ಸಹಾಯ ಇಲ್ಲ. ಸುಮಾರು 200 ಹೆಚ್ಚು ಮನೆ ಇದೆ ಸ್ವಚ್ಛತೆ ಮರಿಚಿಕೆಯಾಗಿದೆ. ರಸ್ತೆ ಬದಿಯಲ್ಲಿ ಗಿಡ ಗಂಟೆಗಳು ಬೆಳೆದಿದ್ದು, ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸುವುದಿಲ್ಲ.


 ಆರೋಗ್ಯ ಅಧಿಕಾರಿ. ಮಂಗಳ ಗೌರಿ ರವರಿಗೂ ಸಹ ಸ್ವಚ್ಛತೆ ಮಾಡಿ ಎಂದು ತಿಳಿಸಿದರೆ.
ಇಂದು ಇಲ್ಲ ನಾಳೆ ಮಾಡುತ್ತೇನೆ ಎಂದು ಸಬಗು ನೀಡಿ ನುನಿಚಿಕೊಳ್ಳುತ್ತಾರೆ. 
ತಿಂಗಳಾದರೂ ಅತ್ತ ಸುಳಿವು ಇರುವುದಿಲ್ಲ. ಮತ್ತೆ ಫೋನ್ ಮೂಲಕ ತಿಳಿಸಿದ್ದಾರೆ. ಯಾವುದಾದರೂ ಒಂದು ಉಡಾಫೆ ಉತ್ತರ ನೀಡುತ್ತಾರೆ. ಮತ್ತೊಂದು ವಿಷಯ. ಇದೇ ಗ್ರಾಮದವರು ನಗರಸಭೆ ಉನ್ನತ ಸ್ಥಾನದಲ್ಲಿದ್ದಾರೆ. ಆದರೂ ಪ್ರಯೋಜನ ಇಲ್ಲ.
ಗ್ರಾಮಸ್ಥರು ರಸ್ತೆ ಬದಿಯಲ್ಲಿ ಗಿಡ ಗಂಟೆಗಳ ಬೆಳೆದು ರಾತ್ರಿ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವುಗಳು ಹೆಚ್ಚಾಗಿದ್ದು, ಜೀವದ ಹಂಗು ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಇತ್ತ ನಗರಸಭೆ ಅಧಿಕಾರಿಗಳು ಗಮನಹರಿಸಿ ಮೂಲಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಗ್ರಾಮಸ್ಥರ ಆಗ್ರಹ ಒತ್ತಾಯ ಮಾಡಿದರು. 
ಇದು ಹೀಗೆ ಮುಂದುವರೆದರೆ ವಾರ್ಡಿನ ನಿವಾಸಿಗಳು ನಗರಸಭೆ ಮುಂಭಾಗ ಖಾಲಿ ಕೊಡವನ್ನು ಇಟ್ಟು ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ್ದಾರೆ.