ನೃತ್ಯ ನೀರಾಜನ–14 (ಕಿರಿಯರ ನೃತ್ಯೋತ್ಸವ)
ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ವತಿಯಿಂದ “ನೃತ್ಯ ನೀರಾಜನ–14”
ನೃತ್ಯೋತ್ಸವವನ್ನು "ನೃತ್ಯ ಪ್ರಭಾ - ಕಾಂತಿಯುತ ನೃತ್ಯ ತೇಜಸ್ಸು" ಎಂಬ ಶೀರ್ಷಿಕೆಯಲ್ಲಿ ಸೆಪ್ಟೆಂಬರ್ 27, ಭಾನುವಾರ ಬೆಳಗ್ಗೆ 10-30ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಜಯಶ್ರೀ ವೇಣು ಕುಲಾವಿ, ಕು|| ಪಿ. ಲಿಖಿತಾ, ಕು|| ಆರ್. ಸಮೃದ್ಧಿ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಆರ್. ರಜನಿ (ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ,
ಬೆಂಗಳೂರು ದಕ್ಷಿಣ ಜಿಲ್ಲೆ) ಮತ್ತು
ಡಾ|| ಪಿ. ಸಾಧನಾಶ್ರೀ (ಕಲಾ ನಿರ್ದೇಶಕಿ,
ಸಾಧನಾ ಸಂಗಮ ಡ್ಯಾನ್ಸ್ ಸೆಂಟರ್ ಮತ್ತು ಆಯುರ್ವೇದ ವೈದ್ಯರು, ಆರೋಗ್ಯವರ್ಧಿನಿ ಆಯುರ್ವೇದಾಲಯ) ಉಪಸ್ಥಿತರಿದ್ದು, ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಲಿದ್ದಾರೆ.
ಕಿರಿಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಅವರ ನೃತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ವತಿಯಿಂದ ತಿಳಿಸಲಾಗಿದೆ.