ಅಧಿಕ ಮಾಸದಲ್ಲಿ ಹರಿ ಕುಣಿದ (ವಿಶೇಷ ದಾಸವಾಣಿ ಕಾರ್ಯಕ್ರಮ)

Jun 3, 2026 - 10:28
 0  13
ಅಧಿಕ ಮಾಸದಲ್ಲಿ ಹರಿ ಕುಣಿದ (ವಿಶೇಷ ದಾಸವಾಣಿ ಕಾರ್ಯಕ್ರಮ)

     ಬೆಂಗಳೂರು: ದಾಸವಾಣಿ ಕರ್ನಾಟಕ ಸಂಸ್ಥೆ, ಹರಿಕಥಾ ವಿದ್ವಾನ್ ಸೋಸಲೆ ನಾರಾಯಣ ದಾಸ್ ಟ್ರಸ್ಟ್ ಹಾಗೂ ಶ್ರೀ ಮಾರುತಿ ಮಹಾ ಗಣಪತಿ ದೇವಸ್ಥಾನ (ಪುಣ್ಯಧಾಮ)  ಇವುಗಳ ಸಂಯುಕ್ತಾಶ್ರಯದಲ್ಲಿ ಅಧಿಕ ಮಾಸದ ಪ್ರಯುಕ್ತ "ಅಧಿಕ ಮಾಸದಲ್ಲಿ ಹರಿ ಕುಣಿದ" ಎಂಬ ಶೀರ್ಷಿಕೆಯಲ್ಲಿ ನಾಡಿನ ಹೆಸರಾಂತ ಗಾಯಕರಿಂದ ಪರಮಾತ್ಮನನ್ನು ಸ್ಮರಿಸುವ 33 ಹರಿದಾಸರ ಪದಗಳ ವಿಶೇಷ ದಾಸವಾಣಿ ಕಾರ್ಯಕ್ರಮವನ್ನು ಜೂನ್ 7, ಭಾನುವಾರ ಸಂಜೆ 5-00ಕ್ಕೆ ರಾಜಾಜಿನಗರ 1ನೇ ಬ್ಲಾಕ್ ನಲ್ಲಿರುವ ಪುಣ್ಯಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಗಾಯಕರಾದ ಪಂಡಿತ್ ಶ್ರೀ ಕನಕಗಿರಿ ಹುಸೇನ್ ಸಾಬ್, ಪಂಡಿತ್ ಶ್ರೀ ಪ್ರಸನ್ನ ಕೊರ್ತಿ, ವಿದುಷಿ ಶ್ರೀಮತಿ ರಮ್ಯಾ ಸುಧೀರ್, ವಿದುಷಿ ಶ್ರೀಮತಿ ಅನುಕೃಪ ರೌಡೂರ್ ಪುರೋಹಿತ್ ಮತ್ತು ಶ್ರೀ ಕೆ.ಪಿ. ಶಿಶಿರ್ ಇವರುಗಳು  ಹಾಡಲಿದ್ದಾರೆ. ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಸಹಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದ ನಿರೂಪಣೆಯನ್ನು ಡಿ ಡಿ ಚಂದನದ ನಿರೂಪಕಿ ಶ್ರೀಮತಿ ಪ್ರವೀಣಾ ಕುಲಕರ್ಣಿ ನಡೆಸಿಕೊಡಲಿದ್ದಾರೆ. 
ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪದಾಧಿಕಾರಿಗಳಾದ ಶ್ರೀ ಶ್ರೀನಿವಾಸಮೂರ್ತಿ ಮತ್ತು ಶ್ರೀ ಜಯರಾಜ್ ಕುಲಕರ್ಣಿ  ವಿನಂತಿಸಿದ್ದಾರೆ.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott