ಕಾನೂನು ಜಾಗೃತಿ ಅಭಿಯಾನ
ಬೆಂಗಳೂರಿನ ಮಾರುತಿ ನಗರದ ಎಸ್.ವಿ.ಎಸ್. ಪಬ್ಲಿಕ್ ಹೈಸ್ಕೂಲ್ ನಲ್ಲಿ ನಮ್ಮ ಕುಟುಂಬ ಚಾರಿಟಬಲ್ ಟ್ರಸ್ಟ್ "ಅರಿವು" ಎಂಬ ಹೆಸರಿನಲ್ಲಿ ಕಾನೂನು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಮುಖ್ಯ ಅತಿಥಿಗಳಾಗಿ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಶಶಿಕುಮಾರ್ ಮತ್ತು ಜ್ಞಾನಭಾರತಿ ಟ್ರಾಫಿಕ್ ಪೊಲೀಸ್ ಇನ್ ಸ್ಪೆಕ್ಟರ್ ಪ್ರೀತಮ್ ದ ಶ್ರೇಯಕರ್, ಜ್ಞಾನಭೋದಿನಿ ಶಾಲೆಯ ದೈಹಿಕ ಶಿಕ್ಷಕರಾದ ಕೆ. ಜಿ. ಚಂದ್ರಶೇಖರ್, ಕೆಪಿಸಿಸಿ ಕಾನೂನು ವಿಭಾಗದ ವಕೀಲರಾದ ತ್ರಿಶೂಲ ಎಂ ರವಿಶಂಕರ್, ಶಿಕ್ಷಣ ತಜ್ಞರಾದ ವೇಣುಗೋಪಾಲ್ ಜಿ.ಸಿ., ಎಸ್.ವಿ.ಎಸ್. ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿಗಳಾದ ಎಂ.ವಿ. ಗಿರೀಶ್, ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಹೆಚ್. ತುಕಾರಾಂ ಭಾಗವಹಿಸಿದ್ದರು. ಧನರಾಜ್, ಚೆನ್ನಕೇಶವ ಎಂ.ಜೆ. ಮತ್ತು ಭಾಸ್ಕರ್ ತೋಟಗೇರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.