ರೌಡಿಸಂ ಗೆ ಕಡಿವಾಣ ವಿಶೇಷ ರೌಡಿ ನಿಗ್ರಹ ಪಡೆ ರಚನೆ ತೇಜಸ್ವಿ ನಾಗಲಿಂಗಸ್ವಾಮಿ :- ಸ್ವಾಗತ
ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ರೌಡಿ ನಿಗ್ರಹ ಪಡೆ ರಚನೆ ಮಾಡಿರುವುದನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದರೆ
ನಾನು ಕೂಡ ಅನೇಕ ವರ್ಷಗಳಿಂದ ರೌಡಿ ಚಟುವಟಿಕೆ ವಿರುದ್ಧ ಹೋರಾಟಗಳನ್ನು ನಡೆಸುತ್ತ ಬಂದಿದ್ದೇನೆ ಮತ್ತು ಅನೇಕ ಬಾರಿ ರಾಜ್ಯ ಸರ್ಕಾರಕ್ಕೆ ಮತ್ತು ಪೋಲಿಸ್ ಇಲಾಖೆಗೆ ರೌಡಿ ನಿಗ್ರಹ ಪಡೆ ಸ್ಥಾಪಿಸುವಂತೆ ಮನವಿ ಕೂಡಾ ಮಾಡಿದ್ದೆ
ಈಗ ರೌಡಿ ನಿಗ್ರಹ ಪಡೆ ರಚನೆ ಆಗಿರುವುದು ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ
ಈ ರೌಡಿ ನಿಗ್ರಹ ಪಡೆ ರಚನೆ ಇಂದ ಜನ ಸಾಮಾನ್ಯರಿಗೆ ರೌಡಿ ಚಟುವಟಿಕೆ ಇದ್ದವರು ಬೆದರಿಕೆ ಹಾಕುವುದು ಮತ್ತು ಹಫ್ತಾ ವಸೂಲಿ ಮಾಡುವವರು ಮತ್ತು ಸಮಾಜದಲ್ಲಿ ಆತಂಕ ಉಂಟುಮಾಡುವವರ ಎದೆಯಲ್ಲಿ ನಡುಕ ಶುರುವಾಗುತ್ತದೆ ಎಂದಿದ್ದಾರೆ
ಒಟ್ಟಾರೆ ಸರ್ಕಾರದ ಈ ನಿರ್ಧಾರದಿಂದ ರೌಡಿ ಚಟುವಟಿಕೆ ಮಟ್ಟಹಾಕಲು ಅನುಕೂಲ ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ
What's Your Reaction?