ತೊಂಗುಲುಕುಪ್ಪ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಯುವಕರಿಂದ ಆರ್ಥಿಕ ನೆರವು
ಬೇತಮಂಗಲ ಹೋಬಳಿಯ ತೊಂಗುಲುಕುಪ್ಪ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸ್ವಗ್ರಾಮದ ಯುವಕರಾದ ತ್ಯಾಗರಾಜ್ ನಾಯ್ಡು, ಹರೀಶ್, ಮಧು ಹಾಗೂ ಲೋಕೇಶ್ ಅವರು ಆರ್ಥಿಕ ಸಹಾಯ ನೀಡಿ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸುಸೂತ್ರ ನಿರ್ವಹಣೆಗೆ ಈ ಯುವಕರು ತಮ್ಮದೇ ಆದ ಕೊಡುಗೆ ನೀಡಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮ ಮತ್ತು ದೇವಾಲಯದ ಮೇಲಿನ ಅಭಿಮಾನದಿಂದ ಅವರು ನೀಡಿದ ನೆರವು ಇತರ ಯುವಕರಿಗೂ ಮಾದರಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ತ್ಯಾಗರಾಜ್ ನಾಯ್ಡು, ಹರೀಶ್, ಮಧು ಮತ್ತು ಲೋಕೇಶ್ ಅವರ ಸೇವಾಭಾವನೆಯನ್ನು ಶ್ಲಾಘಿಸಿ ಸನ್ಮಾನ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಯುವಕರು ನಿರಂತರವಾಗಿ ಬೆಂಬಲ ನೀಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಹರೀಶ್ ಗೌಡ, ತ್ಯಾಗರಾಜ್ ನಾಯ್ಡು, ಲೋಕೇಶ್, ಮಧುಸೂದನ್, ಮುಖಂಡರಾದ ಹನುಮಂತಪ್ಪ, ರಾಮಚಂದ್ರ, ಸುಬ್ರಮಣಿ, ಮಗಪ್ಪ, ವೆಂಕಟ್ರಮಪ್ಪ, ಶ್ರೀನಿವಾಸ್, ಸೇರಿದಂತೆ ಗ್ರಾಮಸ್ಥರಿದ್ದರು.