ಆಲೂರು ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

Jun 8, 2026 - 11:13
 0  22
ಆಲೂರು ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಆಲೂರು ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಅಭಿನಂದನೆ

ಆಲೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸಮಸಮಾಜ ಆಯ್ಕೆಯ ಸಂಕೇತ. ಸಂವಿಧಾನ ಆಶಯಗಳಡಿಯಲ್ಲಿ ಪರಸ್ಪರ ಚರ್ಚಿಸಿ ಮನಸ್ತಾಪವಿಲ್ಲದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಧನಾತ್ಮಕ ಅಂಶ ಹಾಗೂ ಮಾದರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.

 

ಅವರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆಲೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಗೌರವಿಸಿ ಮಾತನಾಡಿ ನೌಕರರಿಗೆ ತಮ್ಮದೇಯಾದ ಸಂಘಟನೆ ಮುಖ್ಯ. ನೌಕರರ ಕಷ್ಟಕಾರ್ಪಣ್ಯಗಳಿಗೆ ಕಾನೂನು ಚೌಕಟ್ಟಿನಲ್ಲಿ, ಇಲಾಖಾ ಆದೇಶಗಳ ಅಡಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಬೇಕು. ಪದಾಧಿಕಾರಿಗಳಿಗೆ ಸಂಯಮ ಮತ್ತು ಸಮತೋಲಿತ ಮನೋಭಾವ ಬಹಳ ಮುಖ್ಯ. ಹಲವು ಮನೋಸ್ಥಿತಿಯ ನೌಕರರನ್ನು ಒಗ್ಗೂಡಿಸಿಕೊಂಡು ಸಾಗಬೇಕಾಗುತ್ತದೆ. ಅನುಭವಿಗಳ ಜೊತೆ ಹೊಸ ಮುಖಗಳ ಯುವಪಡೆ ಆಯ್ಕೆಯಾಗಿರುವುದರಿಂದ ಶಿಕ್ಷಕರ ನಿರೀಕ್ಷೆಯಂತೆ ಕಾರ್ಯನಿರ್ವಹಿಸಬೇಕು ಎಂಬ ಕಿವಿ ಮಾತುಗಳಾಡಿ, ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಮಾತನಾಡಿ ಶಿಕ್ಷಕರ ನಡುವೆ ಉದ್ವಿಘ್ನವಾಗುತ್ತಿದ್ದ ಗುಂಪುಗಾರಿಕೆಯ ಈರ್ಶೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜೇಂದ್ರ, ಎಂ.ಬಿ.ಅಮೃತೇಶ, ಬಿ.ಆರ್.ಧರ್ಮ, ಸಿ.ಎಸ್.ಅಣ್ಣಪ್ಪ, ಚಂದ್ರಮ್ಮ ಸೇರಿದಂತೆ ಹಲವು ಹಿರಿಯ ನಾಯಕರುಗಳ ನೇತೃತ್ವದಲ್ಲಿ ಸಮಾನ ಮನಸ್ಸಿನಿಂದ ರೋಸ್ಟರ್ ವಾರು ಸಂವಿಧಾನ ಆಶಯದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ. ಇಲಾಖೆ ಹಾಗೂ ಸಂಘಟನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇಲಾಖೆ ಸಂಘಕ್ಕೂ ಸ್ಪಂದಿಸಬೇಕು, ಸಂಘ ಇಲಾಖೆಯ ಶ್ರೇಯೋಭಿವೃದ್ಧಿಗೂ ಸ್ಪಂದಿಸುತ್ತದೆ ಎಂದರು.

ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಲೂರು ತಾಲ್ಲೂಕು ನೂತನ ಅಧ್ಯಕ್ಷೆ ಎಂ.ಆರ್.ಶ್ರೀನಿವಾಸ್ ಮಾತನಾಡಿ ಕಳೆದ ಬಾರಿ ತಾಲ್ಲೂಕು ಕಾಯ್ದರ್ಶಿಯಾಗಿ ಅಧ್ಯಕ್ಷರಾದ ಎಂ.ಬಿ.ಅಮೃತೇಶ್ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿದ್ದೇನೆ. ನನ್ನ ಮೇಲೆ ಭರವಸೆಯಿಟ್ಟು ಈ ಬಾರಿ ಅವಿರೋದ ಆಯ್ಕೆಗೆ ಸ್ಪಂದಿಸಿ ಪ್ರಥಮಾವಧಿಯಲ್ಲಿ ಅಧ್ಯಕ್ಷನನ್ನಾಗಿ ಮಾಡಿ ಮಹತ್ತರ ಜವಬ್ದಾರಿ ನೀಡಿರುವ ತಾಲ್ಲೂಕಿನ ಹಿರಿಯ ನಾಯಕರು ಹಾಗೂ ಆಲೂರು ತಾಲ್ಲೂಕಿನ ಸಮಸ್ತ ಶಿಕ್ಷಕ ಬಂಧುಗಳಿಗೆ ನಾನು ಚಿರ ಋಣಿಯಾಗಿದ್ದೇನೆ. ನಿಮ್ಮೆಲ್ಲರ ನಿರೀಕ್ಷೆಯಂತೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಪಂದಿಸಿ ಕಾಯ, ವಾಚಾ, ಮನಸಾ ಕಾರ್ಯನಿರ್ವಹಿಸುತ್ತೇನೆ. ಶಿಕ್ಷಕರ ನೋವು ನಲಿವುಗಳಿಗೆ ಜೊತೆಯಾಗಿರುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ, ನೌಕರರ ಸಂಘದ ಗೌರವಾಧ್ಯಕ್ಷ ಬಿ.ಆರ್. ಧರ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಗೌರವಾಧ್ಯಕ್ಷ ಚೆನ್ನಿಗರಾಮಯ್ಯ, ನೌಕರರ ಸಂಘದ ನಿರ್ದೇಶಕ ವೈ.ಆರ್.ರವಿ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಅಮೃತೇಶ, ಮಾಜಿ ಕಾರ್ಯದರ್ಶಿ ಸಿ.ಎಸ್.ಅಣ್ಣಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಚಂದ್ರಮ್ಮ, ಶಿಕ್ಷಕರಾದ ಎಚ್.ಪಿ. ಜಯಣ್ಣ, ಬಿ.ಎಸ್.ಪರಮೇಶ್, ಎಸ್.ಚೈತ್ರ, ವೀಣಾ, ವಸಂತ, ಎಂ.ಬಿ.ಕುಮಾರ್, ಎಚ್.ಡಿ.ಕುಮಾರ್, ಎಂ.ಬಿ.ಮಹೇಶ, ಮೋಹನಕುಮಾರ್, ಭೂಪಾಲಯ್ಯ, ಆರ್.ಶಿವರಾಂ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

೨೦೨೬-೨೦೩೧ ರ ಅವಧಿಯ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಲೂರು ತಾಲ್ಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಎಂ.ಆರ್. ಶ್ರೀನಿವಾಸ, ಉಪಾಧ್ಯಕ್ಷರಾಗಿ ಎಂ.ಆರ್. ವೇಣುಗೋಪಾಲ, ಮಹಿಳಾ ಉಪಾಧ್ಯಕ್ಷರಾಗಿ ವಿ.ರವಿತ, ಖಜಾಂಚಿಯಾಗಿ ಎಚ್.ಡಿ.ಸೋಮೇಶ್, ಕಾರ್ಯದರ್ಶಿಯಾಗಿ ಸಿ.ಎಸ್.ಪ್ರವೀಣಕುಮಾರ್, ಸಹ ಕಾರ್ಯದರ್ಶಿಯಾಗಿ ಬೇಬಿ ಹಾಜಿರಾ ಅವರುಗಳು ಅವಿರೋಧವಾಗಿ ಆಯ್ಕೆಯಾದರು.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott