ಶ್ರೀ ನಾಗಲಾಪುರ ಸಂಸ್ಥಾನ ಮಠದಲ್ಲಿ ವಿಜೃಂಭಣೆಯಿಂದ ಧರ್ಮ ಜಾಗೃತಿ ಕಾರ್ಯಕ್ರಮ ಯಶಸ್ವಿ

May 30, 2026 - 11:06
May 30, 2026 - 13:10
 0  19
ಶ್ರೀ ನಾಗಲಾಪುರ ಸಂಸ್ಥಾನ ಮಠದಲ್ಲಿ ವಿಜೃಂಭಣೆಯಿಂದ ಧರ್ಮ ಜಾಗೃತಿ ಕಾರ್ಯಕ್ರಮ ಯಶಸ್ವಿ

     ಕೋಲಾರ, ಮೇ. 30:  ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರದಲ್ಲಿನ  ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಮಠ ಹಾಗೂ ಗದ್ದುಗೆ ಲಿಂಗರಾಜೇಶ್ವರಿ ಟ್ರಸ್ಟ್ ವತಿಯಿಂದ ಶ್ರೀಮದ್ ನಾಗಲಾಪುರ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ದಿನೋತ್ಸವದ ಪ್ರಯುಕ್ತ ಧರ್ಮ ಜಾಗೃತಿ ಸಮಾರಂಭ ಹಾಗೂ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಬಸವ ಜಯಂತಿ ಹಾಗೂ ವೀರಭದ್ರಸ್ವಾಮಿ ವಸತಿ ನಿಲಯದ ಮೂರನೇ ವಾರ್ಷಿಕ ಮಹೋತ್ಸವದ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿAದ ಹಾಗೂ ಭಕ್ತಿಭಾವದಿಂದ ನೆರವೇರಿದವು. 
ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಹೊಸಕೋಟೆ ಎಂ.ವಿ.ಜೆ. ವೈದ್ಯಕೀಯ ಆಸ್ಪತ್ರೆಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ನಾಗಲಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಭಕ್ತಮಹಾಶಯರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿಬಿರದ ಸದುಪಯೋಗ ಪಡೆದುಕೊಂಡರು. 
ಪ್ರತಿ ವರ್ಷದ ಪದ್ದತಿಯಂತೆ ಶ್ರೀ ನಾಗಲಾಪುರ ಮಠದ ಶ್ರೀ ಕ್ಷೇತ್ರನಾಥ ಗವಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವAತೆ ಲೋಕಕಲ್ಯಾಣಾರ್ಥವಾಗಿ  ಜಯಂತೋತ್ಸವಗಳು, ಹೋಮಾದಿಗಳು, ಧರ್ಮ ಜಾಗೃತಿ ಮಹೋತ್ಸವಗಳು ಶ್ರದ್ದಾ ಭಕ್ತಿಯಿಂದ ನಡೆದವು.  ಇದೇ ಸಂದರ್ಭದಲ್ಲಿ ಹಲವು ವಿವಿಧ ರೀತಿಯ ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 
ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಹಾಗೂ ಶ್ರೀ ಬಸವೇಶ್ವರರ ವಚನ ಸಂದೇಶಗಳು ಎಲ್ಲರಿಗೂ ಸನ್ಮಾರ್ಗದ ಬೆಳಕಾಗಿ ಪ್ರೇರಣೆ ನೀಡಿದವು. ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ನೈತಿಕ ಬೆಳವಣಿಗೆಯ ಪ್ರತೀಕವಾಗಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು. 
ನಾಗಲಾಪುರ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ, ಪರಮ ಪೂಜ್ಯರ ಆಶೀರ್ವಾದ, ಭಕ್ತರ ಸಹಕಾರ ಹಾಗೂ ಶ್ರೀ ವೀರಭದ್ರ ಸ್ವಾಮಿಯ ಕೃಪೆಯಿಂದ ಮಠದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊAಡಿತು. ಸಮಾಜದ ಒಳಿತಿಗಾಗಿ, ಧರ್ಮದ ಉಳಿವಿಗಾಗಿ ಹಾಗೂ ಯುವಜನರ ಉಜ್ವಲ ಭವಿಷ್ಯಕ್ಕಾಗಿ ಶ್ರೀ ಮಠದ ಸೇವೆಗಳು ನಿರಂತರವಾಗಿ ಸಾಗಲಿ ಎಂದು ಮನವಿ ಮಾಡಿದರು. 
ನಾಗಲಾಪುರ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ, ಧರ್ಮ, ಸಂಸ್ಕೃತಿ ಮತ್ತು ಶಿಕ್ಷಣದ ಮಹತ್ವವನ್ನು ಸಾರುವ ಈ ಪವಿತ್ರ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಭಕ್ತರು, ಗುರುಭಕ್ತರು ಹಾಗೂ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. 
•    ಚಿತ್ರ ಶೀರ್ಷಿಕೆ: 30ನಾಗಲಾಪುರ01: ಶ್ರೀ ನಾಗಲಾಪುರ ಮಠದ ಶ್ರೀಗಳ ನೇತೃತ್ವದಲ್ಲಿ ಶ್ರೀ ನಾಗಲಾಪುರ ಸಂಸ್ಥಾನ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀ ಬಸವೇಶ್ವರ ಜಯಂತಿ, ಶ್ರೀ ವೀರಭದ್ರ ಸ್ವಾಮಿ ವಸತಿ ವಿದ್ಯಾರ್ಥಿ ನಿಲಯದ ಮೂರನೇ ವರ್ಷದ ವಾರ್ಷಿಕೋತ್ಸವ, ಸಮಾರಂಭದ ದೃಶ್ಯಗಳು.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott