ಸಮಾಜ ಸೇವಕ ಬುಚೇಪಲ್ಲಿ ಕೃಷ್ಣಮೂರ್ತಿಗೆ ಜಿಲ್ಲಾ ಮಟ್ಟದ ಅಮೋಘ ಪ್ರಶಸ್ತಿ

ಸಮಾಜ ಸೇವಕ ಬುಚೇಪಲ್ಲಿ ಕೃಷ್ಣಮೂರ್ತಿಗೆ ಜಿಲ್ಲಾ ಮಟ್ಟದ ಅಮೋಘ ಪ್ರಶಸ್ತಿ

     ಬೇತಮಂಗಲ: ಬಹುಜನ ಸಂಘಟನೆಗಳ ಒಕ್ಕೂಟ ಮತ್ತು ಜನ ಸಮೂಹ ಸಂಸ್ಥೆಯ ಆಶ್ರಯದಲ್ಲಿ ಸನಾಸೌ ಸೇವಾ ಟ್ರಸ್ಟ್ ವತಿಯಿಂದ ಮುಳಬಾಗಿಲು ತಾಲ್ಲೂಕಿನ ಅಂಬೇಡ್ಕರ್  ಭವನದಲ್ಲಿ  ಆಯೋಜಿಸಿದ್ದ  18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೆಜಿಎಫ್ ತಾಲ್ಲೂಕಿನ ಸಮಾಜ ಸೇವಕರಾದ ಬುಚೇಪಲ್ಲಿ ಕೃಷ್ಣಮೂರ್ತಿ ಅವರಿಗೆ ಜಿಲ್ಲಾ ಮಟ್ಟದ ಅಮೋಘ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಶಿಕ್ಷಣ ಹಾಗೂ ಸಂಸ್ಕೃತಿ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಕೊಡುಗೆ ಮತ್ತು ವಿಶೇಷವಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಯಿತು.ಪ್ರಶಸ್ತಿ ಸ್ವೀಕರಿಸಿದ  ಬಳಿಕ  ಮಾತನಾಡಿದ   ಬುಚೇಪಲ್ಲಿ ಕೃಷ್ಣಮೂರ್ತಿ,  ಈ ಗೌರವವು ತಮ್ಮ ಸಮಾಜಮುಖಿ ಸೇವೆಯನ್ನು  ಇನ್ನಷ್ಟು    ಜವಾಬ್ದಾರಿಯಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ತಿಳಿಸಿದರು. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಸೇವಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುವುದಾಗಿ ಅವರು ಹೇಳಿದರು.ಈ ಸಂದರ್ಭದಲ್ಲಿ ಕೆಜಿಎಫ್ ತಾಲ್ಲೂಕಿನ ಮುಖಂಡರಾದ ರಾಧಾಕೃಷ್ಣ, ಕೆವಿ ಸುಬ್ರಮಣಿ, ಶಿವ, ತಿಪಣ್ಣ ಉಪಸ್ಥಿತರಿದ್ದರು.