ಬೊಮ್ಮಾಂಡಹಳ್ಳಿಯಲ್ಲಿ ಯುವ ನಾಯಕ ದೇವರಾಜ್ ಅವರ ಹುಟ್ಟುಹಬ್ಬ ಸಂಭ್ರಮಾಚರಣೆ
ಬೇತಮಂಗಲ: ಕೆಜಿಎಫ್ ತಾಲ್ಲೂಕಿನ ಬೊಮ್ಮಾಂಡಹಳ್ಳಿ ಗ್ರಾಮದಲ್ಲಿ ಯುವ ನಾಯಕ ದೇವರಾಜ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಸ್ನೇಹಿತರು ಅದ್ದೂರಿಯಾಗಿ ಆಚರಿಸಿದರು.
ತಮ್ಮ ಸ್ವಗ್ರಾಮವಾದ ಬೊಮ್ಮಾಂಡಹಳ್ಳಿ ಮನೆಯ ಬಳಿ ನೂರಾರು ಯುವಕರು ಹಾಗೂ ಸ್ನೇಹಿತರು ಸನ್ಮಾನಿಸಿ ಹೂ ಗುಚ್ಚ ನೀಡಿ ಪಟಾಕಿ ಸಿಡಿಸಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು ಅವರ ಮುಂದಿನ ಜೀವನ ಸುಖ, ಸಮೃದ್ಧಿ ಹಾಗೂ ಯಶಸ್ಸಿನಿಂದ ಕೂಡಿರಲಿ ಎಂದು ಅಭಿಮಾನಿಗಳು ಹಾಗೂ ಸ್ನೇಹಿತರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೂರಾರು ಯುವಕರು ಅಭಿಮಾನಿಗಳು ಹಾಗೂ ಸ್ನೇಹಿತರು ಹಾಗೂ ಉಪಸ್ಥಿತರಿದ್ದರು.
What's Your Reaction?