ಯಶಸ್ವಿಯಾಗಿ ನಡೆದ ಮತದಾರ ವಿಶೇಷ ಪರಿಷ್ಕರಣೆ (SIR) ಸಭೆ

ಯಶಸ್ವಿಯಾಗಿ ನಡೆದ ಮತದಾರ ವಿಶೇಷ ಪರಿಷ್ಕರಣೆ (SIR) ಸಭೆ

       ಕೆಜಿಎಫ್: ಪಟ್ಟಣದ ಪಾರಂಡಹಳ್ಳಿಯ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (SIR)ಸಭೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ  ಹಮ್ಮಿಕೊಳ್ಳಲಾಗಿತ್ತು.

 ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ವಿವಿಧ ಘಟಕಗಳ ಪದಾಧಿಕಾರಿಗಳು, ಬಿ.ಎಲ್.ಎ. ಕಾರ್ಯಕರ್ತರು ಭಾಗವಹಿಸಿದ್ದರು.

 ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೂಪಕಲಾ ನಿಮ್ಮ ಬೂತ್ ಮಟ್ಟದಲ್ಲಿ ಮತದಾರರ ಪರಿಷ್ಕರಣೆ  ಸಮಯದಲ್ಲಿ ಜಾಗರೂಕರಗಿ ನೋಡಿಕೊಳ್ಳಬೇಕು, ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ.ಎಲ್. ಓ ರವರು ಬಂದಾಗ ಪಕ್ಷದ ವತಿಯಿಂದ ಆಯೋಜಿಸಲ್ಪಟ್ಟಿರುವ ಬಿ.ಎಲ್.ಎ ರವರು ಪ್ರತಿಯೊಬ್ಬರ ಮತದಾರರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು.

 ಮತದಾರನಾ ದಾಖಲೆಗಳು ತಮ್ಮ ಸ್ವಂತ ವಿಳಾಸದಲ್ಲಿದ್ದು ಬೇರೆ ಕಡೆ ವಾಸವಿದ್ದಲ್ಲಿ  ಪರಿಷ್ಕರಣೆ  ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗದಿದ್ದಲ್ಲಿ  ಮತದಾರರ ಪಟ್ಟಿಯಿಂದ  ತೆಗೆದು ಹಾಕುವ ಸಾಧ್ಯತೆ ಇರುತ್ತದೆ ಪಕ್ಷದ ವತಿಯಿಂದ ನೇಮಕವಾಗಿರುವ ಬಿ.ಎಲ್.ಎ ಹಾಗೂ ಬಿ.ಎಲ್.ಓ ರವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಯಮ್,  ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ,  ಜಿಪಂ ಮಾಜಿ ಸದಸ್ಯ ಅಮು ಲಕ್ಷ್ಮೀ ನಾರಾಯಣ್, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸನ್, ಸೇರಿದಂತೆ ಗ್ರಾಮ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.