ಕೋಲಾರ ನೂತನ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿಕುಮಾರ್ ಅವರಿಗೆ ದಲಿತ ಸಿಂಹ ಸೇನೆಯಿಂದ ಅಭಿನಂದನೆ

ಕೋಲಾರ ನೂತನ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿಕುಮಾರ್ ಅವರಿಗೆ ದಲಿತ ಸಿಂಹ ಸೇನೆಯಿಂದ ಅಭಿನಂದನೆ

       ಕೆಜಿಎಫ್: ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಎಂ.ಆರ್. ರವಿಕುಮಾರ್ ಅವರನ್ನು ಕರ್ನಾಟಕ ದಲಿತ ಸಿಂಹ ಸೇನೆ ಸಂಘಟನೆಯ ವತಿಯಿಂದ ಅಭಿನಂದಿಸಲಾಯಿತು.

ಕೋಲಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹೂವಹಳ್ಳಿ ಪ್ರಕಾಶ್ ಅಣ್ಣ ಅವರ ನೇತೃತ್ವದಲ್ಲಿ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಹೂಗುಚ್ಛ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಜಿಲ್ಲೆಯ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಿಂಹ ಸೇನೆಯ ಸಂಸ್ಥಾಪಕ ಅಧ್ಯಕ್ಷ ಹೂವಹಳ್ಳಿ ಪ್ರಕಾಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಸಾಮ್ರಾಟ್ ಕೃಷ್ಣಮೂರ್ತಿ, ಗೌರವ ಅಧ್ಯಕ್ಷ ಆರ್. ಕೆಂಚಪ್ಪ, ಕಾರ್ಯದರ್ಶಿ ಶಿವ, ಸದಸ್ಯ ಮೋಹನ್, ವೆಂಕಟೇಶ್ ನಕ್ಕನಹಳ್ಳಿ, ವೆಂಕಟೇಶ್ ಐತ್ರಸನಹಳ್ಳಿ, ರಾಮಚಂದ್ರ, ರಾಮಕೃಷ್ಣಪ್ಪ ಕ್ಷೇತ್ರನಹಳ್ಳಿ, ಮುನಿಯಪ್ಪ ಗಾಜಲದಿನ್ನೆ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.