ಕರ್ತವ್ಯದ ಜೊತೆಗೆ ಶ್ರಮದಾನ: ಠಾಣೆಯ ಸ್ವಂತ ಕಟ್ಟಡ ಜಾಗವನ್ನು ಸ್ವಚ್ಛಗೊಳಿಸಿದ ಪೊಲೀಸರು
ಬೇತಮಂಗಲ: ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೇತಮಂಗಲ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ 30 ಗುಂಟೆ ಜಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಸ್ವತಃ ಈ ಸ್ವಚ್ಛತಾ ಕಾರ್ಯವನ್ನು ಪೊಲೀಸ್ ಸಿಬ್ಬಂದಿಯೇ ನಡೆಸಿದರು.
ಇಲ್ಲಿಗೆ ಸಮೀಪದ ಬೇತಮಂಗಲ- ಕೆಜಿಎಫ್ ಮುಖ್ಯ ರಸ್ತೆಯ ಹೈವೇ ಬ್ರಿಡ್ಜ್ ಬಳಿ ಕಂದಾಯ ಇಲಾಖೆ ವತಿಯಿಂದ ನೂತನ ಪೊಲೀಸ್ ಠಾಣೆಗೆ ಮಂಜೂರಾಗಿರುವ 30 ಗುಂಟೆ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳು, ಕಸ ಹಾಗೂ ಇತರೆ ಅಡ್ಡಿಗಳನ್ನು ವೃತ್ತ ನಿರೀಕ್ಷಕ ಎಸ್ ಆರ್ ಜಗದೀಶ್ ರವರ ನೇತೃತ್ವದಲ್ಲಿ ಜೆಸಿಬಿ ಯಂತ್ರದಲ್ಲಿ ತೆರವುಗೊಳಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಸ್ಥಳವನ್ನು ಸಿದ್ಧಪಡಿಸಲಾಗುತ್ತಿದೆ.
ಸಾರ್ವಜನಿಕರಿಗೆ ಉತ್ತಮ ಪೊಲೀಸ್ ಸೇವೆ ಒದಗಿಸುವ ಉದ್ದೇಶದಿಂದ ಹೊಸ ಠಾಣೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ, ಜಾಗವನ್ನು ಶುಚಿಗೊಳಿಸುತ್ತಿರುವುದು . ಹೊಸ ಪೊಲೀಸ್ ಠಾಣೆ ನಿರ್ಮಾಣದಿಂದ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳು ದೊರೆಯಲಿದ್ದು, ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯೂ ಮತ್ತಷ್ಟು ಸುಗಮವಾಗಲಿದೆ ಎಂದು ಬೇತಮಂಗಲ ಪೊಲೀಸ್ ವೃತ್ತ ನಿರೀಕ್ಷಕ ಎಸ್ ಆರ್ ಜಗದೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಎಸ್ ಆರ್ ಜಗದೀಶ್ ಉಪನಿರೀಕ್ಷಕ ತ್ಯಾಗರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಉಪಸ್ಥಿತರಿದ್ದರು.
What's Your Reaction?