ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ, ರಂಗಕರ್ಮಿ ಹಾಗೂ ಡಿಂಗ್ರಿ ನಾಗರಾಜ್ ಅವರ ಜನ್ಮದಿನವನ್ನು ಆಡುಗೋಡಿಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿತ್ರರಂಗದ ಕಲಾಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅದ್ದೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ನೆರವೇರಿಸಿ ಹಾಗೂ ಡಿಂಗ್ರಿ ನಾಗರಾಜ್ ಅವರ ಆರೋಗ್ಯ, ಆಯುಷ್ಯ ಇನ್ನಷ್ಟು ಕಲಾಸೇವೆಗೆ ಶುಭ ಹಾರೈಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಎಸ್ಕಾರ್ಟ್ ಶ್ರೀನಿವಾಸ್, ಶಿವಮೊಗ್ಗ ಭಾಸ್ಕರ್, ಆಡುಗೋಡಿ ಶ್ರೀನಿವಾಸ್, ಕಲಾವಿದರಾದ ಜೂನಿಯರ್ ಜಗ್ಗಿ ಬಸವರಾಜು, ಸುಧಾ, ಭೂಮಿ ಪ್ರಿಯ, ಆಡುಗೋಡಿ ರಾಜು, ದಾಸೇಗೌಡ. ಸೇರಿದಂತೆ ಅನೇಕ ಅಭಿಮಾನಿಗಳು
ಸಲ್ಲಿಸಿದರು. ಕೇಕ್ ಕತ್ತರಿಸಿ, ಪುಷ್ಪಗುಚ್ಛಗಳನ್ನು ನೀಡಿ ಜನ್ಮದಿನದ ಶುಭಾಶಯಗಳನ್ನು
ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ನಾಲ್ಕು ಹೆಚ್ಚು ಕಾಲ ದಶಕಗಳಿಗೂ ಸೇವೆ ಸಲ್ಲಿಸಿರುವ ಡಿಂಗ್ರಿ ನಾಗರಾಜ್ ಅವರು 10 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಹಾಗೂ 800ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಹಲವಾರು ಅಭಿನಯಿಸಿ
ಕನ್ನಡಿಗರ ಮನೆಮಾತಾಗಿದ್ದಾರೆ. ತಮ್ಮ ವಿಶಿಷ್ಟ ಹಾಸ್ಯ ಶೈಲಿ, ಸರಳ ವ್ಯಕ್ತಿತ್ವ ಮತ್ತು ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕೇವಲ ನಟನೆಯಲ್ಲಿ ಮಾತ್ರವಲ್ಲದೆ, ಕಲಾವಿದರ ಹಿತಾಸಕ್ತಿಗಾಗಿ ಕೂಡ ಅವರು ನಿರಂತರವಾಗಿ ಶ್ರಮಿಸುತ್ತಿದ್ದು, ಚಲನಚಿತ್ರ ಪೋಷಕ ಸಂಘದ ಅಧ್ಯಕ್ಷರಾಗಿ ಕರ್ನಾಟಕ ಕಲಾವಿದರ ಅನೇಕ ಕಲಾವಿದರ ಸಮಸ್ಯೆಗಳಿಗೆ
ಸ್ಪಂದಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸಾಮಾಜಿಕ ಕಾಳಜಿ ಹಾಗೂ ಕಲಾವಿದರ ಪರ ಹೋರಾಟಗಳು ಚಿತ್ರರಂಗದಲ್ಲಿ ವಿಶೇಷ ಗೌರವವನ್ನು ತಂದಿವೆ.
ಅವರ ಡಿಂಗ್ರಿ ನಾಗರಾಜ್ ಕಲಾಸಾಧನೆಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಸಾವಿರಾರು ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ನೀಡಿ ಗೌರವಿಸಿವೆ. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು, ಯುವ ಕಲಾವಿದರಿಗೆ ಪ್ರೇರಣೆಯಾಗಿ ನಿಂತಿದ್ದಾರೆ.
ಸಂಭ್ರಮದಲ್ಲಿ ಜನ್ಮದಿನದ ಭಾಗವಹಿಸಿದ್ದ ಸ್ನೇಹಿತರು ಹಾಗೂ ಅಭಿಮಾನಿಗಳು, ಡಿಂಗ್ರಿ ನಾಗರಾಜ್ ಅವರು ಇನ್ನೂ ಹಲವು ವರ್ಷಗಳ ಕಾಲ ಉತ್ತಮ ಆರೋಗ್ಯದೊಂದಿಗೆ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
What's Your Reaction?