ಬಾಗಳಿ ಹಾಲು ಒಕ್ಕೂಟದ ವತಿಯಿಂದ ನೂತನ ಉಗ್ರಾಣ ಕಟ್ಟಡದ ಉದ್ಘಾಟನೆ
ಸಂತೆಮರಹಳ್ಳಿ : ಸಮೀಪದ ಬಾಗಳಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 2 ಲಕ್ಷ ರೂ ವೆಚ್ಚದಲ್ಲಿ ನೂತನ ಉಗ್ರಾಣ ಕಟ್ಟಡದ ಉದ್ಘಾಟನೆಯನ್ನು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಚಾಲನೆ ನೀಡಿದರು.
ಈ ವೇಳೆಯಲ್ಲಿ ಮಾತನಾಡಿ ರೈತರು ಉತ್ತಮ ಗುಣಮಟ್ಟದ ಹಾಲು ನೀಡುವುದರ ಜೊತೆಗೆ ಹೈನುಗಾರಿಕೆಯನ್ನು ಬಲ ಪಡಿಸಿಕೊಳ್ಳಬೇಕು ಎಂದರು.
ನಮ್ಮ ಹಾಲು ಒಕ್ಕೂಟದ ವತಿಯಿಂದ ಬರುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಚಾಮುಲ್ ವತಿಯಿಂದ 2 ರೂ ಸಹಾಯ ಧನ ನೀಡಿ ರೈತರ ಹೇಳಿಗೆಗಿ ಸದಾ ಬದ್ಧರಾಗಿರುತ್ತವೆ ಹಾಗೂ ರೈತರಿಗೆ ಬೇಕಾದ ಮ್ಯಾಟ್ ಹಾಗೂ ಸ್ಟಾಪ್ ಕಟರ್ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಭಾಗದ ರೈತರಿಗೆ ಇದೊಂದು ಆದಾಯ ಮೂಲವಾಗಿದೆ ಇದರ ಸದ್ಬಳಕೆಯನ್ನು ಪ್ರತಿಯೊಬ್ಬ ರೈತರು ಬಳಸಿಕೊಳ್ಳುವುದು ಅತ್ಯುಮೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕರಾದ ಬಸವರಾಜು, ಸದಾಶಿವಮೂರ್ತಿ, ನಾಮ ನಿರ್ದೇಶಕರಾದ ಕಮರವಾಡಿ ರೇವಣ್ಣ, ಡೈರಿ ಅಧ್ಯಕ್ಷರಾದ ಕರಗಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ರಾಜಕುಮಾರ್, ಡಾ ಅಮರ್, ಇ ಓ ರಾಜು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮುಖಂಡರಾದ ಚಂದನ್ ಪುಟ್ಟಬುದ್ದಿ, ಬಾಗಳಿ ರೇವಣ್ಣ, ಚಂದ್ರು, ಶಿವಣ್ಣ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.
What's Your Reaction?