ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಹೊಣೆ- ಸಂಪನ್ಮೂಲ ವ್ಯಕ್ತಿ ಎ.ಜಿ.ಸುಧಾಕರ್

ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಹೊಣೆ- ಸಂಪನ್ಮೂಲ ವ್ಯಕ್ತಿ ಎ.ಜಿ.ಸುಧಾಕರ್
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಭಾಗ್ಯನಗರ: ಸಮಾಜದಲ್ಲಿ ಬಾಲಕರ‍್ಮಿಕ ಪದ್ದತಿಯಿಂದ ವಿದ್ಯರ‍್ಥಿಗಳು ಎಚ್ಚರವಹಿಸಬೇಕಾಗಿದೆ ಬಾಲಕರ‍್ಮಿಕರನ್ನು ಪತ್ತೆ ಹಚ್ಚಿ, ಈ ಪಿಡುಗನ್ನು ಸಂಪರ‍್ಣವಾಗಿ ನಿಮರ‍್ಲನೆ ಮಾಡುವುದು ರ‍್ಕಾರಿ ಕೆಲಸ ಮಾತ್ರ ವಲ್ಲ, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಹಿರಿಯ ವಕೀಲ ಎ.ಜಿ.ಸುಧಾಕರ್ ವಿದ್ಯರ‍್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಹೊರವಲಯದ ತಿಮಾಕಾಲಪಲ್ಲಿ ಗ್ರಾಮದಲ್ಲಿರುವ ಶ್ರೀ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಫ, ಅರಣ್ಯ ಇಲಾಖೆ ಸಂಯುಕ್ತಶ್ರಯದಲ್ಲಿ ವಿಶ್ವ ಬಾಲಕರ‍್ಮಿಕರ ವಿರೋಧಿ ದಿನಾಚರಣೆ ಶಾಲಾ ಮಕ್ಕಳಿಗೆ ಅಂಗವಾಗಿ ಕಾನೂನು ಅರಿವು ನೆರವು ಕರ‍್ಯಕ್ರಮ ನಡೆಯಿತು.

ಬಾಲಕರ‍್ಮಿಕರ ಪದ್ದತಿ ವಿರೋಧಿ ದಿನಾಚರಣೆ ಜಾಗೃತಿ ಮತ್ತು ಅರಿವು ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಎ. ಜಿ.ಸುಧಾಕರ್ 14 ರ‍್ಷಗಳಿಂದ 18 ರ‍್ಷದ ಒಳಗಿರುವ ಮಕ್ಕಳು ಶಾಲೆಯನ್ನ ಬಿಟ್ಟು ಗ್ಯಾರೇಜ್, ಖಾಸಗಿ ಕರ‍್ಖಾನೆಗಳಲ್ಲಿ ಕೆಲಸ ಮಾಡುವ ಮಕ್ಕಳನ್ನ ವಿದ್ಯರ‍್ಥಿಗಳು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ, ಅಂತಹವರ ಮೇಲೆ ಕಠಿಣ ಕಾನೂನು ಜರುಗಿಸಲಾಗುವುದು.

 ವಿದ್ಯರ‍್ಥಿಗಳ ದೆಸೆಯಲ್ಲಿ ಮೋಜು ಮಸ್ತಿ ಮಾಡಲು ಹಣ ಬೇಕಾಗಿರುವುದರಿಂದ, ಇಂತಹ ಸಣ್ಣ-ಪುಟ್ಟ ಕೆಲಸಗಳಿಗೆ ವಿನಿಯೋಗಿಸಿಕೊಳ್ಳುತ್ತಾರೆ.ಈ ಬಗ್ಗೆ ಜಾಗೃತಿ ವಹಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಬೇಕಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜೆ. ಎನ್.ಮಂಜುನಾಥ್ ಮಾತನಾಡಿ, ದೇಶದಲ್ಲಿ ಸಧೃಡ ಸಮಾಜ ಕಟ್ಟಲು ಬಾಲಕರ‍್ಮಿಕರ ಬಳಕೆಯಾಗುತ್ತಿರುವುದು ವಿರೋಧಿ ನೀತಿಯಾಗಿದ್ದು,ಇವುಗಳ ಬಗ್ಗೆ ಜಾಗೃತಿ ವಹಿಸಿ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ನಿಯೋಜಿಸಬೇಕಾಗಿದೆ ಎಂದರು.

ಈ ಸಂಧರ್ಭದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಾಲಾ ಮುಖ್ಯಸ್ಥ ಅಲಿ ಸರ್, ಪ್ರಾಂಶುಪಾಲರು ರ‍್ಯನ್ ಮರ‍್ಜಾ,ವಕೀಲರ ಸಂಘದ ಉಪಾಧ್ಯಕ್ಷ ರವಿ, ವಕೀಲರಾದ ಬಾಬು, ರಮಣ,ಬೆ.ಎನ್.ಸುಧಾಕರ್ ಬಾಲು ನಾಯ್ಕ್, ಮಲ್ಲಿಕರ‍್ಜುನ, ಸಾಮಾಜಿಕ ಅರಣ್ಯ ಅಧಿಕಾರಿ ಜಿ.ಬಾಬು,ಉಪ ವಲಯ ಅರಣ್ಯ ಅಧಿಕಾರಿ ಯೋಗೇಶ್, ಅರಣ್ಯ ವೀಕ್ಷಕ, ವೆಂಕಟೇಶ್, ಕೋರ್ಟ್ ಸಿಬ್ಬಂದಿ ಅನೀಲ್, ಸೇರಿದಂತೆ ಮತ್ತಿತರರು ಇದ್ದರು...