ಸ್ಕೆಟಿಂಗನಲ್ಲಿ ಬಿಎಎಸ್ ಶಾಲೆಯ ಮಕ್ಕಳ ಸಾಧನೆ

Jun 5, 2026 - 11:55
 0  12
ಸ್ಕೆಟಿಂಗನಲ್ಲಿ ಬಿಎಎಸ್ ಶಾಲೆಯ ಮಕ್ಕಳ ಸಾಧನೆ

        ಮುದ್ದೇಬಿಹಾಳ: ತಾಲೂಕಿನ ಅಡಲಗೇರಿ ವ್ಯಾಪ್ತಿಯ ಬಿಎಎಸ್‌ ಇಂಟರ್‌ನ್ಯಾಷನಲ್ 
( C.B.S.E.)ಶಾಲೆಯ ವಿದ್ಯಾರ್ಥಿಗಳು ಹಾಸನದಲ್ಲಿ ಇತ್ತೀಚಿಗೆ ಜರುಗಿದ ರಾಜ್ಯ ಮಟ್ಟದ 
ಸ್ಕೇಟಿಂಗ್ ಕ್ರೀಡಾಕೂಟದಲ್ಲಿ  ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕ ಪಡೆದು ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇದೇ ಸಂದರ್ಭದಲ್ಲಿ
ಸಾಧಕ ಕ್ರೀಡಾಪಟುಗಳನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಸನ್ಮಾನಿಸಿ ಅಭಿನಂದಿಸಿದರು. 
ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಅಶೋಕ್ ತುಪ್ಪ ಮಾತನಾಡಿ 
 ನಮ್ಮ ಶಾಲೆಯ ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಎಚ್ ಕೆಎಸ್ ಇಂಟರನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಕಿಂಗ್ಸ್ ಸ್ಕೆಂಟಿಂಗ್ (ಓಪನ್‌) ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 200 ಮೀ., ರೋಡ್ ರೇಸ್, ರಿಯಲ್ ರೇಸ್ ವಿಭಾಗದಲ್ಲಿ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಹಾಗೂ ಮುಂದಿಯು ಕೂಡಾ ಶಾಲೆಯ ಪ್ರತಿಭಾವಂತ ಕ್ರೀಡಾಪಟುಗಳು ಉತ್ತಮ ಕಲಿಕೆಯ ಜೊತೆಗೆ ಪರಿಶ್ರಮಪಟ್ಟು  ಕ್ರೀಡಾಕೂಟಗಳಲ್ಲಿ ಭಾಗವಹಿಸಲಿ, ತಮಗೆ ಸಿಕ್ಕ ಅವಕಾಶದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿ, ಯಶಸ್ಸಿಯಾಗಲಿ ಎಂದು ಶುಭಹಾರೈಸಿದರು.
 ಸಂಸ್ಥೆಯ ಮಾರ್ಗದರ್ಶಕರಾದ ಶಿವನಗೌಡ ಬಿರಾದಾರ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಮಂಗಲ ಬಿರಾದಾರ್ ಮತ್ತು ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ್ ಮತ್ತು ಕೋರ್ಡಿನೇಟರ್ ಸತೀಶ್ ವಾಲಿಕಾರ್, ತರಬೇತಿದಾರ ಶಿವಕುಮಾರ ಶಾರದಳ್ಳಿ ಸೇರಿ ಶಿಕ್ಷಕ
ವೃಂದದವರು, ವಿದ್ಯಾರ್ಥಿಗಳು, ಇನ್ನಿತರರು ಇದ್ದರು.


ವಿಜೇತ ವಿದ್ಯಾರ್ಥಿಗಳ ಹೆಸರುಗಳು 

ಸ್ಕೆಟಿಂಗ್ 200 ಮೀ ರೇಸ್ ನಲ್ಲಿ ಶಕುಂತಲಾ ಎಸ್.ಶಾರದಳ್ಳಿ ಪ್ರಥಮ ಸ್ಥಾನ ರಿಲೇಯಲ್ಲಿ ತೃತೀಯ, ವಿಕ್ರಾಂತ ಶಾರದಳ್ಳಿ ಸ್ಕೆಟಿಂಗ್ ರಿಲೆಯಲ್ಲಿ ಪ್ರಥಮ, 200 ಮೀ ರೇಸ್ ನಲ್ಲಿ ದ್ವಿತೀಯ, ಅಕೀಲ ಎನ್.ಅಸ್ಕಿ ಸ್ಕೆಟಿಂಗ್ ರಿಲೆಯಲ್ಲಿ ದ್ವಿತೀಯ, 200 ಮೀ ರೇಸ್ ನಲ್ಲಿ ತೃತೀಯ, 
ಆದಿತ್ಯಾ ಎನ್.ಅಸ್ಕಿ  ಸ್ಕೇಟಿಂಗ್ ರಿಲೆ ದ್ವಿತೀಯ, 200 ಮೀ ರೇಸ್ ನಲ್ಲಿ ತೃತೀಯ, ಸುದೀತಿ ವಿ.ಕೋರಿ ಸ್ಕೇಟಿಂಗ್ ರಿಲೇ ಪ್ರಥಮ, 200 ಮೀ ರೇಸ್ ನಲ್ಲಿ ದ್ವಿತೀಯ, ನೀಲಕಂಠ ವಿ.ಕೋರಿ ಸ್ಕೇಟಿಂಗ್ ರಿಲೇ ತೃತೀಯ, 200 ಮೀ ರೇಸ್ ನಲ್ಲಿ ತೃತೀಯ, ದೀಕ್ಷ ವಿ.ಮಠ ಸ್ಕೇಟಿಂಗ್ ರಿಲೇ ಪ್ರಥಮ, 200 ಮೀ ರೇಸ್ ನಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott