ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಗದ್ದೇಹೊಸೂರು ಗ್ರಾಮಸ್ತರು

ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಗದ್ದೇಹೊಸೂರು ಗ್ರಾಮಸ್ತರು
ಸುದ್ದಿ ಕಿರಣ ನ್ಯೂಸ್ ಡೆಸ್ಕ್

         ಕೃಷ್ಣರಾಜಪೇಟೆ ತಾಲ್ಲೂಕಿನ ಗದ್ದೇಹೊಸೂರು ಗ್ರಾದಲ್ಲಿ ಬೀದಿ ನಾಯಿಗಳ ಹಾವಳಿ ಎಚ್ಚಾಗಿದ್ದು ದಿನ ನಿತ್ಯ ಕುರಿ, ಕೋಳಿ ಮೇಕೆಗಳ‌ ಮೇಲೆ ದಾಳಿ ಮಾಡುತ್ತಿದ್ದು ಇದರಿಂದ ರೈತರಿಗೆ ಕಷ್ಟಗಳು ಎದುರಾಗಿದೆ ಕೊಡಲೇ ಸಂಬಂಧಪಟ್ಟ ಅಧಿಕರಾಗಿಳು  ಸೂಕ್ತ ಕ್ರಮ ಕೈಗೊಳ್ಳಬೇಕು  ಎಂದು ಗದ್ದೇಹೊಸೂರು ಗ್ರಾಮದ ಡಾಕ್ಟರ್ ಸೋಮಶೇಖರ್ ಮಾದ್ಯಮಕ್ಕೆ ತಿಳಿಸಿದ್ರು..

ಗದ್ದೆಹೊಸೂರು ಗ್ರಾಮದ ಶಕ್ತಿದೇವತೆಯಾದ ಗುಡಿಮಾರಿಯಮ್ಮ ದೇವಾಲಯಲ್ಲಿ ಗ್ರಾಮದ ಸುತ್ತಮುತ್ತಲಿನ ದೇವಿಯ ಭಕ್ತರು ಬೀಗರ ಔತಣ, ಪರ, ನಾಮಕಾರಣ ಸೇರಿದಂತೆ ಶುಭ ಸಮಾರಂಭಗಳಿಗೆ ಮಾಂಸಹಾರ ಊಟವನ್ನು ತಾಯಾರು ಮಾಡುತ್ತಾರೆ ಇದನ್ನೇ ಆದರಿಸಿ ಇಲ್ಲಿ ನೂರಾರು ಬೀದಿ ನಾಯಿಗಳು ಇಲ್ಲಿ ವಾಸವಾಗಿವೆ... ಅದೇ ರೀತಿ ಗದ್ದೆಹೊಸೂರು ಗ್ರಾಮದ ಬಹುತೇಕ ರೈತರು ತೋಟದ ಮನೆಗಳಲ್ಲಿ ವಾಸವಾಗಿದ್ದು ಜೀವನೋದಾರಕ್ಕೆ ಕುರಿ, ಮೇಕೆ, ಕೋಳಿ, ಹಸು, ಎಮ್ಮೆಗಳನ್ನು ಸಾಕಿಕೊಂಡು ಜೀವನ ನೆಡೆಸುತ್ತಾ ಬಂದಿದ್ದಾರೆ ಅದರೆ ಇಲ್ಲಿ  ಬೀದಿ ನಾಯಿಗಳ ಸಂತತಿ ಹೆಚ್ಚಾಗಿದ್ದು ಪದೇ ಪದೇ ಸಾಕು  ಪ್ರಾಣಿಗಳ ಮೇಲೆ ದಾಳಿ ನೆಡೆಸಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ.. ಅಲ್ಲದೆ ಮಕ್ಕಳು ಶಾಲೆಗಳಿಗೆ  ಹೋಗುವಾಗ ನಾಯಿ ದಾಳಿ ಮಾಡಬಹುದು ಇಂತಹ  ಭಯದ ವಾತಾವರಣದಲ್ಲಿ ಜೀವನ ನೆಡೆಸಬೇಕಾದ ಪರಿಸ್ಥಿತಿ ಗದ್ದೇಹೊಸೂರು ಗ್ರಾಮಸ್ತರಿದೆ  ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳನ್ನು ಬಂದಿಸಿ ದೂರಾದ ಕಾಡುಗಳಿಗೆ ಬಿಟ್ಟು ರೈತರಿಗೆ ಅನುಕೋಲ ಮಾಡಿಕೊಡುವಂತೆ ಮಾಧ್ಯಮದ ಮೂಲಕ  ಒತ್ತಾಯಿಸಿದ್ರು..