ಬ್ಲಾಕ್ ಕಾಂಗ್ರೆಸ್ ಸದಸ್ಯರಾಗಿ ಎಸ್. ಸಾಮ್ ರಾಜ್ ಆಯ್ಕೆ
ಕೆಜಿಎಫ್: ಬ್ಲಾಕ್ ಕಾಂಗ್ರೆಸ್ ಕಮಿಟಿಯ ಸದಸ್ಯರಾಗಿ ಎಸ್. ಸಾಮ್ ರಾಜ್ ಆಯ್ಕೆ ಮಾಡಲಾಯಿತು.
ಎಸ್. ಸಾಮ್ ರಾಜ್ ರವರು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಹಿರಿಯ ಪ್ರಾಮಾಣಿಕ ಕಾರ್ಯಕರ್ತರಾಗಿದ್ದು, 2 ನೇ ವಾರ್ಡಿನಲ್ಲಿ ಮಾಜಿ ನಗರಸಭೆ ಸದಸ್ಯರಾಗಿ ಪಕ್ಷದ ಬೆಳವಣಿಗೆಗೆ ಸಹಕಾರ ಮಾಡಿದ ನಾಯಕ ಎಂದು. ಆದ್ದರಿಂದ ಅವರನ್ನು ಗುರುತಿಸಿ. ಬ್ಲಾಕ್ ಕಾಂಗ್ರೆಸ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ಮಾಣಿಕ್ಯಾನ್ ತಿಳಿಸಿದರು.
ಎಸ್ .ಸಾಮ್ ರಾಜ್. ಮಾತನಾಡಿ ಸಮಿತಿಯಲ್ಲಿ ಆಯ್ಕೆ ಮಾಡಿರೋದು ತುಂಬಾ ಸಂತೋಷ ಪಕ್ಷಕ್ಕೆ ನಾನು ಪ್ರಾಮಾಣಿಕವಾಗಿ ದುಡಿಯುತ್ತೇನೆ. ನನ್ನ ವಾರ್ಡಿನಲ್ಲಿರುವ ಸಾರ್ವಜನಿಕರ ಸಮಸ್ಯೆಗಳಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಮತ್ತಷ್ಟು ಪಕ್ಷವನ್ನು ಬಲಪಡಿಸಲು ಶ್ರಮವಹಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕಿ ರೂಪಕಲಾ ಶಶಿಧರ್. ಕೂಡ ಚೇರ್ಮನ್. ಜಯಂತಿ ಶ್ರೀನಿವಾಸನ್. ಹಿರಿಯ ಮುಖಂಡ ಮೋಹನ್ ರಾಜ್. ಉಪಸ್ಥಿತರಿದ್ದರು.