ವೆಂಗಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಸಿಸಿ ರಸ್ತೆ ಭಾಗ್ಯ: ಶಾಸಕಿ ರೂಪಕಲಾ ಗೆ ಮುಖಂಡರಿಂದ ಕೃತಜ್ಞತೆ

Jun 8, 2026 - 11:34
 0  16
ವೆಂಗಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಸಿಸಿ ರಸ್ತೆ ಭಾಗ್ಯ: ಶಾಸಕಿ ರೂಪಕಲಾ ಗೆ ಮುಖಂಡರಿಂದ ಕೃತಜ್ಞತೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೇತಮಂಗಲ: ವೆಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪಲ್ಲಿ, ಮುಷ್ಟುರು , ಗೋಪೆನಹಳ್ಳಿ ಹಾಗೂ ವೆಂಗಸಂದ್ರ ಗ್ರಾಮಗಳ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 50 ಲಕ್ಷ ಅನುದಾನವನ್ನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಶಾಸಕಿ ರೂಪಕಲಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವೆಂಗಸಂದ್ರ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳುವ ರಸ್ತೆಯು ಹದಗಟ್ಟಿದ್ದು ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರು ಮುಖಂಡರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು, ಗ್ರಾಮದ ಸ್ಮಶಾನಕ್ಕೆ ಶವಸಂಸ್ಕಾರ ಮಾಡಲು ತೆರಳುವುದಕ್ಕೆ ಸೂಕ್ತ ರಸ್ತೆ ಇಲ್ಲದೆ ಮಳೆ ಅಭಾವದಿಂದ ರಸ್ತೆ ಹದಗೆಟ್ಟಿ ಸಂಚರಿಸಲು ತುಂಬಾ ಅನಾನುಕೂಲವಾಗಿತ್ತು ಇದೆ ರೀತಿ ವೆಂಗಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಮುಷ್ಟೂರು, ಮಲ್ಲಹಳ್ಳಿ, ಗೋಪೆನಹಳ್ಳಿ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಾಸಕಿ ರೂಪಕಲಾ ಅವರು ನಮ್ಮ ಮನವಿಗೆ ಸ್ಪಂದಿಸಿ ತಮ್ಮ ವಿಶೇಷ ಅನುದಾನದಲ್ಲಿ 50 ಲಕ್ಷ ರೂಗಳನ್ನು ಬಿಡುಗಡೆ ಮಾಡಿರುತ್ತಾರೆ ಅವರಿಗೆ ನಮ್ಮ ವೆಂಗಸಂದ್ರ ಗ್ರಾಪಂ ಯ ಮುಖಂಡರಿಂದ ಹಾಗೂ ಗ್ರಾಮಸ್ಥರಿಂದ ಅಭಿನಂದನೆಗಳನ್ನು ತಿಳಿಸಿದರು.

ಶಾಸಕರಿಗೆ ಸಚಿವೆ ಸ್ಥಾನ ನೀಡಲು ಆಗ್ರಹ: ಶಾಸಕಿ ರೂಪಕಲಾ ಅವರು ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರು ಕ್ಷೇತ್ರದಲ್ಲಿ ಸರ್ವತೋಮುಖವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮತ್ತು ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಅವರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಾಗೂ ರಾಜ್ಯದ ಅಭಿವೃದ್ಧಿಯನ್ನು ಮಾಡಲು ಸಚಿವ ಸ್ಥಾನ ನೀಡಿ ಎಂದು ಮಾನ್ಯ ಮುಖ್ಯಮಂತ್ರಿಗಲಾದ ಡಿಕೆ ಶಿವಕುಮಾರ್ ಮತ್ತು ಪಕ್ಷದ ಹೈ ಕಮೆಂಡ ಗೆ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ಎಪಿಎಂಸಿ ಸದಸ್ಯರಾದ ಯುವರಾಣಿ ವೆಂಕಟಾಚಲಪತಿ, ಮುರಳಿಕೃಷ್ಣ, ಮಾಜಿ ಗ್ರಾಪಂ ಅಧ್ಯಕ್ಷರಾದ ಸುನೀತಾ ಶೇಖರ್, ಶಂಕರಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷರಾದ ಪದ್ಮಮ್ಮ ರಮೇಶ್, ರವಿ, ನಾರಾಯಣಸ್ವಾಮಿ, ಮುಖಂಡರಾದ ನಾಗೇಂದ್ರ ಬುಜ್ಜಿ, ಚಂದ್ರಯ್ಯ, ರೆಡ್ಡಪ್ಪ, ನಾರಾಯಣಪ್ಪ, ಮುನಿರತ್ನಪ್ಪ, ದೇವರಾಜ್, ಮಂಜುನಾಥ್, ಅಣ್ಣಯ್ಯ, ಬಾಬು ರೆಡ್ಡಿ ಮಹೇಶ್, ಭಾಸ್ಕರ್, ನಾಟರಿ ವೆಂಕಟಚಲಪತಿ, ಅಶ್ವತ್, ಸುಧಾಕರ್, ಸೇರಿದಂತೆ ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott