ಸಾವಯವ ಮತ್ತು ನೈಸರ್ಗಿಕ ಕೃಷಿಗೆ ವಿ ಸ್ಟಾರ್ ಪ್ಲಸ್ ಉತ್ತಮ ಸಹಕಾರಿ-ಜಿಲ್ಲಾ ನಿರ್ದೇಶಕ ಗಿರೀಶ್

ಸಾವಯವ ಮತ್ತು ನೈಸರ್ಗಿಕ ಕೃಷಿಗೆ ವಿ ಸ್ಟಾರ್ ಪ್ಲಸ್ ಉತ್ತಮ ಸಹಕಾರಿ-ಜಿಲ್ಲಾ ನಿರ್ದೇಶಕ ಗಿರೀಶ್
ವರದಿ ಸುಬ್ಬು ಭಾಗ್ಯನಗರ

      ಭಾಗ್ಯನಗರ: ವಿ ಸ್ಟಾರ್ ಪ್ಲಸ್' ರೈತರಿಗೆ ಕೃಷಿ ಉತ್ಪನ್ನಗಳ (ಕ್ರಿಮಿನಾಶಕ ಮತ್ತು ಸಾವಯವ ಗೊಬ್ಬರ) ಮೂಲಕ ಸಹಾಯ ಮಾಡುತ್ತದೆ. ಇದು ಬೆಳೆಗಳ ರಕ್ಷಣೆ ಮತ್ತು ಇಳುವರಿ ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿಯಾಗಿತ್ತದೆ ಎಂದು ವಿ ಸ್ಟಾರ್ ಪ್ಲಸ್ ಕೃಷಿ ಗೊಬ್ಬರಗಳ ಉತ್ಪಾದನೆಗಳ ಜಿಲ್ಲಾ ನಿರ್ದೇಶಕ ಗಿರೀಶ್ ತಿಳಿಸಿದ್ದಾರೆ 

ಪಟ್ಟಣದ ಡಿ ವಿ ಜಿ ಮುಖ್ಯ ರಸ್ತೆ ಬಳಿ ಇರುವ ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ 
ಕಚೇರಿ ಆವರಣದಲ್ಲಿ ವಿ ಸ್ಟಾರ್ ಪ್ಲಸ್ ಕಂಪನಿ ಉತ್ಪನ್ನಗಳ ಪ್ರಯೋಜನಗಳು ಬಗ್ಗೆ ರೈತರಿಗೆ ಹಾಗೂ ರೈತ ಮುಖಂಡರಿಗೆ ಸಾವಯುವ ಪದ್ದತಿಯ ಮಾಹಿತಿ ಮತ್ತು ತರಬೇತಿ ಆಯೋಜಿಸಲಾಗಿತ್ತು.

ನಂತರ ಮಾತನಾಡಿದ ವಿ ಸ್ಟಾರ್ ಪ್ಲಸ್ ಕೃಷಿ ರಸಗೊಬ್ಬರಗಳ ಉತ್ಪಾದನೆಗಳ ಜಿಲ್ಲಾ ನರ‍್ದೇಶಕ ಗಿರೀಶ್,ವಿ-ಸ್ಟಾರ್ ಪ್ಲಸ್ ಕೀಟನಾಶಕವಲ್ಲ, ಬದಲಿಗೆ ಇದು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುವ ಜೈವಿಕ ಪೋಷಕಾಂಶವಾಗಿದೆ,ಇವು ಮಣ್ಣಿನ ಆರೋಗ್ಯವನ್ನು ವೃದ್ಧಿಸಿ, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ದರ‍್ಘಕಾಲದವರೆಗೆ ಒದಗಿಸುತ್ತವೆ. ರಾಸಾಯನಿಕ ಗೊಬ್ಬರಗಳಿಗೆ ಹೋಲಿಸಿದರೆ ಇವು ಅತ್ಯಂತ ಸುರಕ್ಷಿತ ಮತ್ತು ಸುಸ್ಥಿರ ಕೃಷಿಗೆ ಸಹಕರಿಯಾಗಿತ್ತದೆ.ಇವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಗಳ ಗುಣಮಟ್ಟವನ್ನು ಸುಧಾರಿಸುತ್ತವೆ. ಇವುಗಳನ್ನು ಬಳಸುವುದರಿಂದ ರಾಸಾಯನಿಕಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಹಾಗೂ ಮಣ್ಣಿನ ತೇವಾಂಶ ಮತ್ತು ಸೂಕ್ಷ್ಮಜೀವಿಗಳ ಚಟುವಟಿಕೆ ವೃದ್ಧಿಸುತ್ತದೆ.

ಹಿಂದಿನ ಕಾಲದಲ್ಲಿ ರಾಸಾಯನಿಕ ಗೊಬ್ಬರಗಳು ಇಲ್ಲದೆ ಒಳ್ಳೆಯ ಉತ್ತಮವಾಗ ನಾಟಿ ತಳಿಯ ಬೆಳೆಗಳನ್ನು ಬೆಳೆಗಳನ್ನು ಬೆಳೆಯುತ್ತಿದ್ದರು ಆಗ ಮಾನವ ಆಯುಷ್ಯು ಧರ‍್ಘಕಾಲವಾಗಿ ಬದುಕುವಂತಾಗಿತ್ತು ಆದರೆ ಈಗ ಎಲ್ಲಾ ಬೆಳೆಗಳಿಗೂ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆ ಕಳೆದುಕೊಂಡು ಬರಡು ಭೂಮಿಯಾಗಿದೆ ಆದ್ದರಿಂದ ರೈತರು ಸಾವಯವ ಗೊಬ್ಬರ ಹಾಕಿ ಬೆಳೆಗಳನ್ನು ಬೆಳೆಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್. ಎನ್.ಗೋವಿಂದರೆಡ್ಡಿ,ವಿ ಸ್ಟಾರ್ ಪ್ಲಸ್ ಕೃಷಿ ರಸಗೊಬ್ಬರಗಳ,ವ್ಯವಸ್ಥಾಪಕರಾದ ನರಸಿಂಹಯ್ಯ, ರೇಣುಕಾ, ಗಣೇಶ್, ರೈತ ಮುಖಂಡರಾದ ಅಶ್ವಥಪ್ಪ, ಚೌಡರೆಡ್ಡಿ, ವೆಂಕಟರೆಡ್ಡಿ, ವೀರನಾರಾಯಣ, ಸುಧಾಕರ್ ರೆಡ್ಡಿ,ಪಾಪಿರೆಡ್ಡಿ,ರಾಮಲಿಂಗರೆಡ್ಡಿ,ನಾರಾಯಣಸ್ವಾಮಿ,ಮದ್ದಿರೆಡ್ಡಿ,ಈರಪ್ಪ, ಮಂಜುನಾಥ್ ರೆಡ್ಡಿ, ಡೈರಿ ಶ್ರೀನಿವಾಸ್, ಭಾಸ್ಕರ್ ಸೇರಿದಂತೆ ಅನೇಕ ರೈತರು ಇದ್ದರು..