ಕೋಟ್ಯಾಂತರ ರೂ ಮೌಲ್ಯದ ಸರ್ಕಾರಿ ಜಾಗ ಒತ್ತುವರಿ ಆರೋಪ: ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಗಳು

ಕೋಟ್ಯಾಂತರ ರೂ ಮೌಲ್ಯದ ಸರ್ಕಾರಿ ಜಾಗ ಒತ್ತುವರಿ ಆರೋಪ: ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಗಳು

ಬೇತಮಂಗಲ: ಇಲ್ಲಿಗೆ ಸಮೀಪದ ಕ್ಯಾಸಂಬಳ್ಳಿ ಗ್ರಾಪಂ ವ್ಯಾಪ್ತಿಯ ಕರಡಿಗಾನಹಳ್ಳಿ ಗ್ರಾಮದ ಸರ್ವೇ ನಂ 49 ರಲ್ಲಿ 1.14 ಎಕರೆ ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಜಾಗವನ್ನು  ಆಂಧ್ರ ಮೂಲದವರು ಭೂ ಕಬಳಿಕೆ ಮಾಡಿರುವ ಆರೋಪ ಕುರಿತು  ಡಾ ಬಿ ಆರ್ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ನೀಡಿರುವ  ಪತ್ರಿಕಾ ಹೇಳಿಕೆ ಹಾಗೂ ಸರ್ಕಾರಿ ಜಾಗ ಒತ್ತುವರಿ ತೆರುವು ಗೊಳಿಸುವ ಬಗ್ಗೆ ಅರ್ಜಿ ನೀಡಿದ ಹಿನ್ನೆಲೆ  ಇಂದು ಕಂದಾಯ ವೃತ್ತ ನಿರೀಕ್ಷರು ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

 ಕಂದಾಯ ವೃತ್ತ ನಿರೀಕ್ಷಕ ಮಂಜುನಾಥ್ ಸ್ಥಳ ಪರಿಶೀಲಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು, ಇದಕ್ಕೆ ಸಂಬಂಧಿಸಿದಂತೆ ನಕಾಷೆಯಲ್ಲಿ 1.14 ಎಕರೆ ಗುಂಟೆ ಜಮೀನು ಸರ್ಕಾರಿ ಬೀಡು ಎಂಬಂತೆ ತೋರಿಸುತ್ತಿದ್ದು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ದೃಢಪಟ್ಟಲ್ಲಿ ತಕ್ಷಣ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಆಸ್ತಿ ಸಾರ್ವಜನಿಕರ ಹಿತಕ್ಕಾಗಿ ಮೀಸಲಾಗಿದ್ದು, ಅದನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿರುವುದು ಕಾನೂನುಬಾಹಿರವಾಗಿದೆ. ಈ ವಿಷಯಾನುಸಾರವಾಗಿ ಕಳೆದ 15 ದಿನಗಳ ಹಿಂದೆ ಪತ್ರಿಕಾ ಹೇಳಿಕೆ ನೀಡಿದ್ದೆವು ಈ ದಿನ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದಕ್ಕೆ ಸಂಬಂದಿಸಿದಂತೆ ಸಂಪೂರ್ಣ ಧಾಖಲೆಗಳನ್ನು ಪರಿಶೀಲಿಸಿ ಒತ್ತುವರಿ ದೃಢ ಪಟ್ಟಲ್ಲಿ ಸರ್ಕಾರಿ ಒತ್ತುವರಿ ಜಾಗವನ್ನು ತೆರುವು ಗೊಳಿಸುವ ಕಾರ್ಯಾಚರಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ  ಕಂದಾಯ ವೃತ್ತ ನಿರೀಕ್ಷಕರು ಮಂಜುನಾಥ್, ಎವೈವಿಕೆ ಸಂಘಟನೆಯ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಹೋಬಳಿ ಅಧ್ಯಕ್ಷ ಸಂಜು, ಯುವ ಘಟಕ ಅಧ್ಯಕ್ಷ ಕಿಶೋರ್ ಚರಣ್ ಸೇರಿದಂತೆ ಉಪಸ್ಥಿತರಿದ್ದರು.