ಎಸ್.ಜಾನಕಿ ಅವರ ನಿಧನಕ್ಕೆ ಬಸವಶ್ರೀ ಯೋಗಿಪ್ರಭುಗಳ ಸಂತಾಪ

ಎಸ್.ಜಾನಕಿ ಅವರ ನಿಧನಕ್ಕೆ ಬಸವಶ್ರೀ ಯೋಗಿಪ್ರಭುಗಳ ಸಂತಾಪ

        ಮೈಸೂರು: ಗಾನ ಕೋಗಿಲೆ‌ ಎಸ್.ಜಾನಕಿ ಅವರ ನಿಧನಕ್ಕೆ ಬಸವಶ್ರೀ ಯೋಗಿಪ್ರಭುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿನಯ, ಸರಳತೆ, ಆದ್ಯಾತ್ಮ ಅಳವಡಿಸಿಕೊಂಡು ಬದುಕಿ ಮಾದರಿ ಯಾಗಿದ್ದಾರೆ ತಮ್ಮ ಗಾಯನದ ಮೂಲಕ ಕನ್ನಡ ಚಿತ್ರರಂಗಕ್ಕೆ ಜೀವ ತುಂಬಿದ ಗಾಯನ ಮಾತೆ ಎಂದು ಶ್ರೀಗಳು ಬಣ್ಣಿಸಿದ್ದಾರೆ.

ಎಸ್ ಜಾನಕಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಮೈಸೂರಿನಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ವಿದೆ ಇದು ಮೈಸೂರು ನಗರಕ್ಕೆ ಮೆರುಗು ತಂದು ಕೊಟ್ಟಿದೆ,ಅದರಂತೆ ಮೈಸೂರಲ್ಲಿ ಎಸ್ ಜಾನಕಿ ಮತ್ತು ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಿ ಸಾಂಸ್ಕೃತಿಕ ಕಲೆಗಳನ್ನು ನಾಡಿಗೆ ತಿಳಿಸುವ ಕಾರ್ಯವನ್ನು ಕರ್ನಾಟಕ ಸರ್ಕಾರ ಮಾಡಲಿ ಎಂದು ಬಸವಶ್ರೀ ಯೋಗಿಪ್ರಭುಗಳು ಸಲಹೆ ನೀಡಿದ್ದಾರೆ.

ಸಿನಿಮಾ ನಟರು, ಗಾಯಕರು ಹಾಗೂ ಚಿತ್ರರಂಗದವರು ಎಸ್ ಜಾನಕಿ ಅಮ್ಮನವರನ್ನು ನೋಡಿ ಕನ್ನಡ ನಾಡು ನುಡಿಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಸುಮಾರು ನಲ್ವತ್ತು ಸಾವಿರ ಹಾಡುಗಳನ್ನು ಎಲ್ಲಾ ಭಾಷೆಯಲ್ಲೂ ಹಾಡಿ ನಾಡಿನ ಜನರ ಮನಸುಗಳಲ್ಲಿ ಉಳಿದಿದ್ದಾರೆ. ನಾಲ್ಕೈಯ್ದು ಹಾಡುಗಳನ್ನು ಹಾಡಿದ ಕೂಡಲೇ ಅಹಂಕಾರ ತುಂಬಿಕೊಂಡು ನಡೆಯುವವರು ಎಸ್ ಜಾನಕಮ್ಮನ ನೋಡಿ ಕಲಿಯಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರು ನಿಜಕ್ಕೂ ಪುಣ್ಯ ಮಾಡಿದೆ, ಎಸ್ ಜಾನಕಿ ಮೈಸೂರಲ್ಲಿ ಕೊನೆಯ ದಿನಗಳನ್ನು ಕಳೆಯ ಬಯಸಿ ಮತ್ತು ಈ ಮಣ್ಣಿನಲ್ಲೇ ಪ್ರಾಣ ಅರ್ಪಿಸಿದ್ದು ಮೈಸೂರಿಗೆ ಸಿಕ್ಕ ಮತ್ತೊಂದು ಗರಿ ಎಂದು ಬಸವಶ್ರೀ ಯೋಗಿಪ್ರಭುಗಳು ಹೇಳಿದ್ದಾರೆ.