ಗಾಳಿ ಮಳೆಗೆ ರಸ್ತೆಗೆ ಉರುಳಿದ ಬೃಹತ್ ಮರ-ತೆರವು ಕಾರ್ಯಕ್ಕೆ ಮುಂದಾದ–ಯುವ ಮುಖಂಡ ಕೆ.ವಿ.ಪ್ರಶಾಂತ್

ಗಾಳಿ ಮಳೆಗೆ ರಸ್ತೆಗೆ ಉರುಳಿದ ಬೃಹತ್ ಮರ-ತೆರವು ಕಾರ್ಯಕ್ಕೆ ಮುಂದಾದ–ಯುವ ಮುಖಂಡ ಕೆ.ವಿ.ಪ್ರಶಾಂತ್

ಭಾಗ್ಯನಗರ: ಬೆಳ್ಳಂಬೆಳಗ್ಗೆ ಬಿದ್ದ ಮಳೆಯ ಅಬ್ಬರಕ್ಕೆ ಗೂಳೂರು ಮತ್ತು ಚಿನ್ನಕಾಯಲಪಲ್ಲಿ ಮಧ್ಯೆ ನಡು ರಸ್ತೆಯಲ್ಲಿ ಅಡ್ಡವಾಗಿ ಬಿದ್ದಿ ಮರ ದಿಂದ ದ್ವಿಚಕ್ರ ವಾಹನಗಳು, ಆಟೋಗಳು, ಶಾಲಾ ವಾಹನಗಳು ಸೇರಿದಂತೆ ಹಲವು ವಾಹನಗಳು ರಸ್ತೆಯ ಎರಡೂ ಬದಿಯಲ್ಲಿ ನಿಂತುಕೊಂಡಿದ್ದವು. ಇದೇ ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೈತರು, ವಿದ್ಯಾರ್ಥಿಗಳು, ಕೂಲಿಕಾರರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ತೆರಳುವ ಜನ ಸಂಚರಿಸುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದು,ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಕೆಲಸಗಳಿಗೆ ತೆರಳುತ್ತಿದ್ದ ಜನರು ಸಾಕಷ್ಟು ಸಮಯ ರಸ್ತೆ ಮೇಲೆಯೇ ಕಾಯುವಂತಾಯಿತು.

ತಾಲ್ಲೂಕಿನ ಗೂಳೂರು ಮತ್ತು ಚಿನ್ನಕಾಯಲಪಲ್ಲಿ ಗ್ರಾಮದ ಮಧ್ಯೆ ಬೆಳ್ಳಂಬೆಳಿಗ್ಗೆ ಸುರಿದ ಭಾರೀ ಗಾಳಿ ಮಳೆಯ ಪರಿಣಾಮ ಬೃಹತ್ ಮರವೊಂದು ರಸ್ತೆ ಮಧ್ಯೆ ಉರುಳಿಬಿದ್ದ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಘಟನೆಯ ಮಾಹಿತಿ ತಿಳಿದ ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಪ್ರಶಾಂತ್ ಕುಮಾರ್ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಕೂಡಲೇ ಜೆಸಿಬಿ ಯಂತ್ರವನ್ನು ಘಟನಾ ಸ್ಥಳಕ್ಕೆ ಕರೆಸಿ ರಸ್ತೆ ಮೇಲೆ ಅಡ್ಡಳಾಗಿ ಬಿದ್ದಿದ್ದ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. ಕೆಲವೇ ಸಮಯದಲ್ಲಿ ಮರವನ್ನು ಸಂಪೂರ್ಣ ತೆರವುಗೊಳಿಸಲು ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ಸಹ ಸಹಕರಿಸಿದ್ದು,ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳಿಗಾಗಿ ಕಾಯದೇ ತಕ್ಷಣ ಸ್ಪಂದಿಸಿ ಸಾರ್ವಜನಿಕರ ಸಮಸ್ಯೆ ಪರಿಹರಿಸಿದ ಪ್ರಶಾಂತ್ ಕುಮಾರ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ತಕ್ಷಣ ಕ್ರಮ ಕೈಗೊಂಡೆವು. ಮಳೆಗಾಲದಲ್ಲಿ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು-ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ.ಪ್ರಶಾಂತ್